

ಕುಂಬಳೆ: ಕೇರಳ ಹೋಟೆಲ್-ರೆಸ್ಟೋರೆಂಟ್ ಅಸೋಸಿಯೇಷನ್ ಕಾಸರಗೋಡು ಸಹಯೋಗದಲ್ಲಿ, ಕುಂಬಳೆ ವ್ಯಾಪಾರಿ ಭವನದಲ್ಲಿ ಹೋಟೆಲ್ಗಳಲ್ಲಿ ಅಡುಗೆ ಮಾಡುವ ಅನ್ಯರಾಜ್ಯ ಕಾರ್ಮಿಕರಿಗೆ ಫೋಸ್ಟಾಕ್ ತರಬೇತಿ ತರಗತಿ ಇತ್ತೀಚೆಗೆ ನಡೆಸಲಾಯಿತು.
ಆಹಾರ ಸುರಕ್ಷತಾ ಅಧಿಕಾರಿ ಆದಿತ್ಯನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಹಾರ ಸುರಕ್ಷತೆ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಗೆ ರಾಜ್ಯದಲ್ಲಿ ಹೆಗ್ಗಳಿಕೆ ಇದೆ ಎಂದರು. ತರಬೇತುದಾರ ಕಾಮೇಶ್ ಸೇಲಂ ತರಗತಿ ನಡೆಸಿಕೊಟ್ಟರು.
ಸಂಘಟನೆ ಜಿಲ್ಲಾಧ್ಯಕ್ಷ ನಾರಾಯಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಮಮ್ಮು ಮುಬಾರಕ್ ಸ್ವಾಗತಿಸಿದರು. ಕುಂಬಳೆ ಘಟಕದ ಕಾರ್ಯದರ್ಶಿ ಸವಾದ್ ವಂದಿಸಿದರು. ಅಬ್ದುಲ್ಲಾ ತಾಜ್ ಮೊದಲಾದವರು ಮಾತನಾಡಿದರು.