

ಗದಗ: ರಾಷ್ಟ್ರದ ನಿಜವಾದ ಅಭಿವೃದ್ಧಿ ಗ್ರಾಮಗಳ ಬೆಳವಣಿಗೆಯಲ್ಲಿ ಅಡಗಿದ್ದು, ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಹೊಸ ಆವಿಷ್ಕಾರದೊಂದಿಗೆ ಅಭಿವೃದ್ಧಿಗೆ ನಾಂದಿಯಾಗಬೇಕು. ಪದವೀಧರರು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಮುಂದಾಗಬೇಕು. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ದೇಶ ಆರ್ಥಿಕ ಸ್ಥಿತಿ ಭದ್ರವಾಗಲಿದೆ ಎಂದು ಮೈಸೂರಿನ ಗ್ರಾಸ್ರೂಟ್ಸ್ ರಿಸರ್ಚ ಮತ್ತು ಅಡ್ವೋಕಸಿ ಮೂವ್ವೆುಂಟ್ನ ಸಂಸ್ಥಾಪಕ ಅಧ್ಯಕ್ಷ ಡಾ.ಆರ್. ಬಾಲಸುಬ್ರಹ್ಮಣ್ಯಂ ಹೇಳಿದರು.
ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯದ ವತಿಯಿಂದ ಶನಿವಾರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ಘಟಿಕೋತ್ಸವ ದಿಕ್ಸೂಚಿ ಭಾಷಣ ಮಾಡಿದರು.
ಆರ್ಡಿಪಿಆರ್ ವಿವಿಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಸರ್ಕಾರ ಅವಕಾಶ ಕಲ್ಪಿಸಬೇಕು. ಸರ್ಕಾರ ಅವರನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಭಾಗದ ಜನರಲ್ಲಿ ಹೊಸ ಆವಿಷ್ಕಾರಗಳ ಚಿಂತನೆಗೆ ಕೊರತೆಯಿಲ್ಲ. ಮೂಲಸೌಕರ್ಯಗಳ ಕೊರತೆಯಿದ್ದು ಅವುಗಳನ್ನು ಪೂರೈಸಿದಲ್ಲಿ ಯಶಸ್ಸು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾಜಕ್ಕೆ ಸರ್ಕಾರ ಹಾಗೂ ಸರ್ಕಾರಕ್ಕೆ ಸಮಾಜ ಕೈಜೋಡಿಸಿ ಸಹಕರಿಸಿದರೆ ಗ್ರಾಮೀಣಾಭಿವೃದ್ಧಿ ಖಂಡಿತ ಸಾಧ್ಯ ಎಂದರು.
ಸ್ವತಃ ವೈದ್ಯರಾಗಿ ತಾವು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ಬಳಿಯ ರಾಜಾಪುರ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಲ್ಲಿನ ಮಹಿಳೆಯರು ಆಡಿದ ಮಾತುಗಳು ಬುಡಕಟ್ಟು ಜನರ ಅಭಿವೃದ್ಧಿಗೆ ಪ್ರೇರಣೆ ನೀಡಿತು ಎಂದು ಅವರು ತಮ್ಮ ಅನುಭವ ವಿವರಿಸಿದರು.
ವಿವಿ ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ಆರ್ಡಿಪಿಆರ್ ವಿವಿ ಪ್ರಥಮ ಘಟಿಕೋತ್ಸವ ಇದಾಗಿದ್ದು ಗ್ರಾಮೀಣ ಪರಿವರ್ತನೆಯಡೆಗೆ ಒಂದು ಹೆಜ್ಜೆಯಾಗಿದೆ ಎಂದರು.
2018-19 ಮತ್ತು 2019-20ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸ್ನಾತಕೋತ್ತರ 5 ಕೋರ್ಸ್ಗಳಲ್ಲಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಮತ್ತು ಸ್ವರ್ಣ ಪದಕ ನೀಡಲಾಯಿತು. ದ್ವಿತೀಯ ಹಾಗೂ ತೃತೀಯ ರ್ಯಾಂಕ್ ಪಡೆದವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಶಾಸಕ ಎಚ್.ಕೆ. ಪಾಟೀಲ ಅವರಿಗೆ ಡಾಕ್ಟರ್ ಆಫ್ ಲಾಸ್ ಗೌರವ ಪದವಿ ಹಾಗೂ ದೇಶದ ಗ್ರಾಮೀಣ ಮತ್ತು ಬುಡಕಟ್ಟು ಜನಾಂಗಗಳ ಪುನರ್ ನಿರ್ವಣದಲ್ಲಿ ನೀಡಿರುವ ಮಹತ್ತರ ಸೇವೆಯನ್ನು ಪರಿಗಣಿಸಿ ಡಾ.ಅಶೋಕ ಮಹಾದೇವ ದಳವಾಯಿ ಅವರಿಗೆ ಡಾಕ್ಟರ್ ಆಫ್ ಲಿಟರೇಚರ್ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು. ವಿವಿ ಸಹ ಕುಲಾಧಿಪತಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
2018-19ನೇ ಸಾಲಿನ ರ್ಯಾಂಕ್ ವಿಜೇತರು: ಆರ್ಡಿಪಿಆರ್ ಎಂಬಿಎ ಕೋರ್ಸ್ನಲ್ಲಿ ಸುದೇಶ ರಾವ್ ಪ್ರಥಮ, ಪೂರ್ಣಿಮಾ ದ್ವಿತೀಯ, ವಿರೂಪಾಕ್ಷಯ್ಯ ಕುಲಕರ್ಣಿ ತೃತೀಯ ಸ್ಥಾನ. ಎಂಎ ಕೋರ್ಸ್ನಲ್ಲಿ ನಾಗರಾಜ ಎಸ್. ಪ್ರಥಮ, ಸಿದ್ದೇಶ ಎಸ್. ದ್ವಿತೀಯ, ಫಾತೀಮಾ ನರಗುಂದ ತೃತೀಯ. ಎಂಎಸ್ಸಿ (ಜಿಯೋ ಇನ್ ಫಾರ್ವೆಟಿಕ್ಸ್) ಬಸಂತಿ ಶರಣಬಸಪ್ಪ ಪಾಟೀಲ ಪ್ರಥಮ, ಸುಮಲತಾ ಯಲಬಾನವಿ ದ್ವಿತೀಯ, ದೀಪಾ ಹಂಚಿನಾಳ ತೃತೀಯ, ಎಂಎಸ್ಡಬ್ಲು ಕೋರ್ಸ್ನಲ್ಲಿ ಪ್ರತಿಭಾ ಸಾಸ್ವಿಹಳ್ಳಿ ಪ್ರಥಮ, ಸುಮಾ ಪೂಜಾರ ದ್ವಿತೀಯ, ಶಿವಯೋಗಪ್ಪ ರಿತ್ತಿ ತೃತೀಯ. ಎಂಕಾಂ ಕೋರ್ಸ್ನಲ್ಲಿ ಪರಮೇಶ್ವರ ಪ್ರಥಮ, ಮಂಜುನಾಥ ಜಿ. ದ್ವಿತೀಯ, ಅಶ್ವಿನಿ ಓದುಗೌಡ್ರ ತೃತೀಯ ಸ್ಥಾನ ಪಡೆದಿದ್ದಾರೆ.
2019-20ನೇ ಸಾಲಿನ ರ್ಯಾಂಕ್ ವಿಜೇತರು: ಎಂಬಿಎ ಕೋರ್ಸ್ನಲ್ಲಿ ಗಿರೀಶ ಮೇವುಂಡಿ ಪ್ರಥಮ, ಭಾಗ್ಯಶ್ರೀ ಪಾಟೀಲ ದ್ವಿತೀಯ, ಓಂಕಾರ ರೆಡ್ಡಿ ಕುರಹಟ್ಟಿ ತೃತೀಯ. ಆರ್ಡಿಪಿಆರ್ ಎಂಎ ಕೋರ್ಸ್ನಲ್ಲಿ ಸೀಮಾಕೌಸರ್ ಕುಕನೂರ ಪ್ರಥಮ, ಹಂಸವತಿ.ಡಿ. ದ್ವಿತೀಯ, ಶ್ರೀಶೈಲ ಪೊಲೀಶಿ ತೃತೀಯ. ಎಂಎಸ್ಸಿಯಲ್ಲಿ (ಜಿಯೋ ಇನ್ ಫಾರ್ವೆಟಿಕ್ಸ್) ಶಿವಕುಮಾರ ರಕ್ಕಸಗಿ ಪ್ರಥಮ, ಅರ್ಚನಾ ಹಾನಗಲ್ ದ್ವಿತೀಯ, ಡಿ.ಪ್ರತಿಭಾ ತೃತೀಯ. ಎಂಎಸ್ಸಿ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಕೋರ್ಸ್ನಲ್ಲಿ ಮನಿಷಾ ಸಿ. ಪ್ರಥಮ, ಗುತ್ತವಾಣಿ ಪ್ರಸನ್ನ ದ್ವಿತೀಯ, ಶ್ರೇಯಸ್ ಗೌಡ ಬಿ.ಎಚ್ ತೃತೀಯ. ಎಂಪಿ.ಎಚ್ ಕೋರ್ಸ್ನಲ್ಲಿ ಡಾ. ಮಹಿಮಾ ಬೆಳವಡಿ ಪ್ರಥಮ, ಕಲ್ಲನಗೌಡ ಪಾಟೀಲ ದ್ವಿತೀಯ, ಡಾ.ಪ್ರೀತಿ ಪಟ್ಟಣಶೆಟ್ಟಿ ತೃತೀಯ.
ಎಂಎಸ್ಡಬ್ಲ್ಯೂ ಕೋರ್ಸ್ನಲ್ಲಿ ನಿಶಾ ಪ್ರಥಮ, ನಾಗರತ್ನ ಮುನೆನ್ನವರ ದ್ವಿತೀಯ, ದೇವರಾಜ ದೊಡ್ಡಮನಿ ತೃತೀಯ. ಎಂಕಾಂ ಕೋರ್ಸ್ನಲ್ಲಿ ಐಶ್ವರ್ಯ ಶ್ರೀಶೈಲ ಜೋಳದ ಪ್ರಥಮ, ಸುಜಾತಾ ಗೊರವನಕೊಳ್ಳ ದ್ವಿತೀಯ, ಸೋನಿಯಾ ದತ್ತುಸಾ ಬಾಕಳೆ ತೃತೀಯ ರಾ ರ್ಯಾಂಕ್ ಪಡೆದಿದ್ದಾರೆ.
ಅತಿ ಹೆಚ್ಚು ಅಂಕ ಗಳಿಸಿದವರು: 2018-19ನೇ ಸಾಲಿನ 5 ಸ್ನಾತಕೋತ್ತರ ಕೋರ್ಸ್ಗಳ ಪೈಕಿ ಬಸಂತಿ ಶರಣಬಸಪ್ಪ ಪಾಟೀಲ ಅವರು ಎಂಎಸ್ಸಿ (ಜಿಯೋ ಇನ್ ಫಾರ್ವೆಟಿಕ್ಸ್) 85.6 ಅಂಕ ಪಡೆದಿದ್ದಾರೆ. 2019-20ನೇ ಸಾಲಿನ 7 ಸ್ನಾತಕೋತ್ತರ ಕೋರ್ಸ್ಗಳ ಪೈಕಿ ಮನಿಷಾ ಸಿ. ಅವರು ಎಂಎಸ್ಸಿ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಶೇ. 90.1 ಅಂಕ ಪಡೆಯುವ ಮೂಲಕ ವಿಶ್ವ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ಸಹ ಕುಲಾಧಿಪತಿ ಕೆ.ಎಸ್. ಈಶ್ವರಪ್ಪ ಅವರು ಸ್ವರ್ಣ ಪದಕ ನೀಡುವ ಮೂಲಕ ಪ್ರಶಸ್ತಿ ಪತ್ರ ವಿತರಿಸಿದರು.
ದೇಸಿ ಸೊಗಡು: ಪ್ರಥಮ ಘಟಿಕೋತ್ಸವದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು, ವಿದ್ಯಾರ್ಥಿಗಳು ದೇಸಿ ಸೊಗಡು ಸಾರುವ ಸಾಂಪ್ರದಾಯಿಕ ಖಾದಿ ವಸ್ತ್ರ ಧರಿಸಿದ್ದರು.
ಆರ್ಡಿಪಿಆರ್ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಸ್ವರ್ಣ ಪದಕ ಸಮೇತ ಸ್ನಾತಕೋತ್ತರ ಪದವಿ ಪಡೆದಿರುವುದು ಖುಷಿ ತಂದಿದೆ. ಗ್ರಾಮೀಣ ಪ್ರದೇಶದ ಜನರ ಸೇವೆ ಮಾಡುವ ಅಭಿಲಾಷೆ ಇದ್ದು, ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬೇಕು.ಬಸಂತಿ ಪಾಟೀಲ, ಪ್ರಥಮ ರ್ಯಾಂಕ್, ಎಂಎಸ್ಸಿ ಜಿಯೋ ಇನ್ಫಾರ್ವೆಟಿಕ್ಸ್ಪಿಜಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಬೇಕೆಂಬ ಕನಸು ಈಡೇರಿದೆ. ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸುವ ಕೆಲಸ ಮಾಡಬೇಕೆಂಬ ಆಸೆ ಇದೆ. ಮುಖ್ಯವಾಗಿ ಫಾರ್ವಿುಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ತಂತ್ರಜ್ಞಾನ ಬಳಸಿಕೊಂಡು ಗ್ರಾಮೀಣ ಭಾಗದ ಜನರ ಆರ್ಥಿಕ ಸ್ಥಿತಿ ವೃದ್ಧಿಸಬೇಕೆಂಬ ಮಹತ್ತರ ಕನಸಿದೆ. | ಮನಿಷಾ.ಸಿ., ಪ್ರಥಮ ರ್ಯಾಂಕ್, ಎಂಎಸ್ಸಿ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ