ವೇದಿಕೆ ನಿರ್ವಹಣೆ ಗೊಂದಲವಿಲ್ಲದೆ ಅಚ್ಚುಕಟ್ಟಾಗಿರಲಿ: ಮುಡಾ ಆಯುಕ್ತೆ ಕೆ.ವೀಣಾ ಹೇಳಿಕೆ

Forum Management Committee Meeting Mandya
Published on

ಮಂಡ್ಯ: ಸಮ್ಮೇಳನದ ವೇದಿಕೆ ಕಾರ್ಯಕ್ರಮಗಳು ಶಿಸ್ತಿನಿಂದ ಅಚ್ಚುಕಟ್ಟಾಗಿ ನಡೆಯುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಮ್ಮೇಳನ ವೇದಿಕೆ ನಿರ್ವಹಣಾ ಸಮಿತಿ ಸದಸ್ಯ ಕಾರ್ಯದರ್ಶಿ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಕೆ.ವೀಣಾ ತಿಳಿಸಿದರು.

ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಬೋರ್ಡ್ ರೂಂನಲ್ಲಿ ಆಯೋಜಿಸಿದ್ದ ವೇದಿಕೆ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೂರು ದಿನಗಳ ಕಾಲ ಪ್ರಧಾನ ವೇದಿಕೆ ಸೇರಿದಂತೆ ಮತ್ತೆರಡು ಸಮಾನಂತರ ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಗಳ ಸಮಯ ನಿರ್ವಹಣೆ ತುಂಬಾ ಮುಖ್ಯವಾಗಿದ್ದು, ಅದನ್ನು ಪಾಲಿಸದಿದ್ದರೆ ದಿನದ ಕಾರ್ಯಕ್ರಮಗಳೆಲ್ಲಾ ಅಸ್ತವ್ಯಸ್ತವಾಗುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಅತಿಥಿಗಳಿಗೆ ಅಗತ್ಯಕ್ಕನುಗುಣವಾಗಿ ಸೂಕ್ತ ಆಸನ ವ್ಯವಸ್ಥೆ, ಕುಡಿಯುವ ನೀರು ಮುಂತಾದುವು ಸರಬರಾಜಾಗುವಂತೆ ನೋಡಿಕೊಳ್ಳಬೇಕು. ಕಾರ್ಯಕ್ರಮ ನಿರೂಪಕರು ಸಮಯ ವ್ಯರ್ಥವಾಗದಂತೆ ನಡೆಸುವುದನ್ನು ಖಚಿತಪಡಿಸಿಕೊಳ್ಳುವುದು. ವೇದಿಕೆ ಮೇಲೆ ಅನಗತ್ಯವಾಗಿ ಜನ ಸೇರುವುದನ್ನು ನಿಯಂತ್ರಿಸಬೇಕು. ಗಣ್ಯರಿಗೆ ನೀಡಬೇಕಾದ ಹಾರ ಸ್ಮರಣಿಕೆ ಮುಂತಾದ ಪರಿಕರಗಳ ವಿವರವನ್ನು ಮುಂಚಿತವಾಗಿ ತಿಳಿದುಕೊಳ್ಳಬೇಕು. ವೇದಿಕೆ ನಿರ್ವಹಣೆಗಾಗಿ 5 ಲಕ್ಷ ರೂ ಮಂಜೂರಾಗಿದ್ದು, ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳೋಣ. ಆಹ್ವಾನ ಪತ್ರಿಕೆ ಬಂದ ನಂತರ ಮತ್ತೊಮ್ಮೆ ಸಭೆ ನಡೆಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳೋಣ ಎಂದು ತಿಳಿಸಿದರು.

ಸಂಚಾಲಕ ವ.ನಂ.ಶಿವರಾಂ, ಕಸಾಪ ನಗರ ಅಧ್ಯಕ್ಷೆ ಸುಜಾತಾ ಕೃಷ್ಣ, ಪ್ರತಿಭಾಂಜಲಿ ಡೇವಿಡ್, ಶಿಕ್ಷಕಿ ಎಂ.ಯು.ಶ್ವೇತಾ, ಗಾಯಕ ಎಂ.ಎನ್.ಶ್ರೀಧರ್, ಸುಂಡಹಳ್ಳಿ ಮಹೇಶ್, ಕಸಾಪ ಮಾಧ್ಯಮ ಸಂಯೋಜಕ ಎಲ್.ಕೃಷ್ಣ, ಸಂಘ ಸಂಸ್ಥೆ ಪ್ರತಿನಿಧಿ ಹೊಳಲು ಶ್ರೀಧರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ, ವಕೀಲರಾದ ಎಂ.ಜೆ.ಜೈನ್, ಕೆ.ಎಂ.ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net