

ಮದ್ದೂರು: ಪಟ್ಟಣದ ಪುರಸಭೆಗೆ 2024-25ನೇ ಸಾಲಿಗೆ 42.04 ಲಕ್ಷ ರೂ.ಉಳಿತಾಯ ಬಜೆಟ್ ಅನ್ನು ಆಡಳಿತಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಮಂಡಿಸಿದರು.
ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಮಂಗಳವಾರ ಬಜೆಟ್ ಮಂಡಿಸಿದ ಅವರು, ಪಟ್ಟಣದ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಸಾರ್ವಜನಿಕ ಶೌಚಗೃಹ, ಸ್ಮಶಾನಗಳ ಅಭಿವೃದ್ಧಿ, ಒಳಚರಂಡಿ ಕಾಮಗಾರಿ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ, ಉದ್ಯಾನಗಳ ಅಭಿವೃದ್ಧಿ, ಮಳೆ ನೀರು ಸಂಗ್ರಹ ಕಾಮಗಾರಿ, ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.
ಪ್ರಮುಖ ಆದಾಯಗಳು:
ಆಸ್ತಿ ತೆರಿಗೆ ಮತ್ತು ದಂಡ 2.85 ಕೋಟಿ ರೂ., ಮಳಿಗೆಗಳ ಬಾಡಿಗೆ 15 ಲಕ್ಷ ರೂ., ಕಟ್ಟಡ ಪರವಾನಗಿ ಶುಲ್ಕಗಳು ಮತ್ತು ಸುಧಾರಣೆ ಶುಲ್ಕಗಳು 8.10 ಲಕ್ಷ ರೂ., ಉದ್ದಿಮೆ ಪರವಾನಗಿ ಶುಲ್ಕ 15 ಲಕ್ಷ ರೂ., ನೀರಿನ ಶುಲ್ಕ ಮತ್ತು ಒಳಚರಂಡಿ ಸಂಪರ್ಕಗಳ ಶುಲ್ಕಗಳ ಠೇವಣಿ 1.5ಕೋಟಿ ರೂ., ಘನತಾಜ್ಯ ನಿರ್ವಹಣಾ ಶುಲ್ಕ 20 ಲಕ್ಷ ರೂ., ಅನುಪಯುಕ್ತ ನಿರ್ವಹಣಾ ಶುಲ್ಕಗಳು 10 ಲಕ್ಷ ರೂ., ರಸ್ತೆ ಅಗೆತ ಶುಲ್ಕಗಳು 6 ಲಕ್ಷ ರೂ., ಮಾರುಕಟ್ಟೆ ಶುಲ್ಕಗಳು 5 ಲಕ್ಷ ರೂ., ಖಾತೆ ಬದಲಾವಣೆ ಶುಲ್ಕ, ಖಾತೆ ಪ್ರತಿಗಳ ಶುಲ್ಕಗಳ 13 ಲಕ್ಷ ರೂ., ಜಾಹೀರಾತು ತೆರಿಗೆ 1.50 ಲಕ್ಷ ರೂ., ಬ್ಯಾಂಕ್‌ಗಳ ಖಾತೆಗಳಿಂದ ಬಂದ ಬಡ್ಡಿ 12 ಲಕ್ಷ ರೂ., ಇತರ ಮೂಲಗಳ ಶುಲ್ಕಗಳು ರೂ. 52.45 ಲಕ್ಷ ರೂ. (ಟೆಂಡರ್ ಫಾರ್ಮ್, ಸಕ್ಕಿಂಗ್ ಮೆಷಿನ್ ಶುಲ್ಕ, ನೆಲ ಬಾಡಿಗೆ, ವಾಹನ ನಿಲುಗಡೆ ಶುಲ್ಕಗಳು, ಸ್ಟಾಂಪ್ ಶುಲ್ಕ, ಪ್ರಮಾಣ ಪತ್ರಗಳು, ಇತರ ಶುಲ್ಕಗಳು, ದಂಡ, ಇತರ ಆದಾಯ) ಆದಾಯ ನಿರೀಕ್ಷಿಸಲಾಗಿದೆ ಎಂದರು.
ವೆಚ್ಚಗಳು:
ಕಟ್ಟಡ ನಿರ್ಮಾಣ 1.70 ಕೋಟಿ ರೂ., ಪುರಸಭಾ ಕಚೇರಿ ಲಾನ್, ಕಾಂಪೌಂಡ್, ಗೇಟ್ ನವೀಕರಣ ಮತ್ತು ಉದ್ಯಾನ ಅಭಿವೃದ್ಧಿ ಕಾಮಗಾರಿಗಾಗಿ 25 ಲಕ್ಷ ರೂ., ಕಚೇರಿ ಉಪಕರಣ, ಸಲಕರಣೆಗಳು, ಪೀಠೋಪಕರಣಗಳಿಗಾಗಿ 15 ಲಕ್ಷ ರೂ., ಸ್ವಾಗತ ಕಮಾನು, ಕಾಂಪೌಂಡ್, ಕ್ರೀಡಾಂಗಣ ಅಭಿವೃದ್ಧಿ, ರಸ್ತೆ ಬದಿ ಮಾರ್ಗಸೂಚಿ ಫಲಕ ಅಳವಡಿಕೆ ಹಾಗೂ ಇತರ ಕಾಮಗಾರಿಗಾಗಿ 13 ಲಕ್ಷ ರೂ., ರಸ್ತೆ, ಪಾದಚಾರಿ ಮತ್ತು ಚರಂಡಿ ಅಭಿವೃದ್ಧಿಗಾಗಿ 1.25 ಕೋಟಿ ರೂ., ಬೀದಿ ದೀಪ ಕಾಮಗಾರಿಗೆ 12 ಲಕ್ಷ ರೂ., ಮಳೆ ನೀರಿನ ಚರಂಡಿ ಕಾಮಗಾರಿಗಾಗಿ 20 ಲಕ್ಷ ರೂ., ಸಾರ್ವಜನಿಕ ಶೌಚಗೃಹ ಕಟ್ಟಡಗಳ ನಿರ್ಮಾಣ ಕಾಮಗಾರಿಗಾಗಿ 15 ಲಕ್ಷ ರೂ., ಸ್ಮಶಾನ ಅಭಿವೃದ್ಧಿಗಾಗಿ 20 ಲಕ್ಷ ರೂ., ನೈರ್ಮಲ್ಯ ವಾಹನ, ಸಲಕರಣೆ ಖರೀದಿಗಾಗಿ 45 ಲಕ್ಷ ರೂ., ಘನತ್ಯಾಜ್ಯ ವಸ್ತು ನಿರ್ವಹಣೆ ಅಭಿವೃದ್ಧಿಗಾಗಿ 30 ಲಕ್ಷ ರೂ., ನೀರು ಸರಬರಾಜು ಕಟ್ಟಡಗಳ ನಿರ್ಮಾಣ, ನೀರು ಸಬರಾಜು ಅಭಿವೃದ್ಧಿ ಕಾಮಗಾಗಿ ಮತ್ತು ಯಂತ್ರೋಪಕರಣಗಳ ಖರೀದಿಗಾಗಿ 70 ಲಕ್ಷ ರೂ., ಒಳಚರಂಡಿ ಅಭಿವೃದ್ಧಿ ಕಾಮಗಾರಿಗಾಗಿ 20 ಲಕ್ಷ ರೂ., ಪಾರ್ಕ್ ಅಭಿವೃದ್ಧಿ ಕಾಮಗಾರಿಗಾಗಿ 25 ಲಕ್ಷ ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆರ್ಥಿಕ ಹಿಂದುಳಿದ ವರ್ಗ, ಅಂಗವಿಕಲರ ಅಭಿವೃದ್ಧಿಗಾಗಿ 16 ಲಕ್ಷ ರೂ. ವೆಚ್ಚ ಮಾಡುವ ಯೋಜನೆ ಇದೆ.
ರಾಜ್ಯ ಮತ್ತು ಕೇಂದ್ರ ಅನುದಾನಗಳು:
ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ 45 ಲಕ್ಷ ರೂ., ಎಸ್‌ಎಫ್‌ಸಿ ವೇತನ ಅನುದಾನ 2.92 ಕೋಟಿ ರೂ., ಎಸ್‌ಎಫ್‌ಸಿ ವಿದ್ಯುತ್ ಅನುದಾನ 3.60 ಕೋಟಿ ರೂ., ಜನಗಣತಿ ಅನುದಾನ ಹಾಗೂ ಇತರೆ ಅನುದಾನ 7 ಲಕ್ಷ ರೂ., ನಲ್ಮ್ ಅನುದಾನ 5.50 ಲಕ್ಷ ರೂ., ಸ್ವಚ್ಛ ಭಾರತ್ ಮಿಷನ್ ಅನುದಾನ 10.50 ಲಕ್ಷ ರೂ., 15 ನೇ ಹಣಕಾಸು ಅನುದಾನ 1.25 ಕೋಟಿ ರೂ., ವಿಶೇಷ ಅನುದಾನ 5.50 ಕೋಟಿ ರೂ., ಎಸ್‌ಎಫ್‌ಸಿ ಕುಡಿಯುವ ನೀರು 15.5 ಲಕ್ಷ ರೂ.
ಪುರಸಭೆಗೆ ಸರ್ಕಾರಿ ನಾಮನಿರ್ದೇಶನ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಮೋಹನ್, ಅಜ್ಲಾಮ್‌ಖಾನ್, ವೆಂಕಟೇಶ್, ಎಚ್.ಕೃಷ್ಣಪ್ಪ, ಶಾಂತಮ್ಮ ಅವರನ್ನು ಅಭಿನಂದಿಸಲಾಯಿತು. ಪುರಸಭಾ ಮುಖ್ಯಾಧಿಕಾರಿ ಕರಿಬಸವಯ್ಯ, ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಇದ್ದರು.