ಕೋಟೆ ಕಂದಕ ಭರ್ತಿ, ಸಂಚಾರಕ್ಕೆ ತೊಂದರೆ

mdl road
ಮುದಗಲ್ ಕೋಟೆ ಮುಂಭಾಗದ ಕಂದಕ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿರುವುದು.
Published on

ಮುದಗಲ್: ಪಟ್ಟಣದ ಐತಿಹಾಸಿಕ ಕೋಟೆ ಮುಂಭಾಗದಲ್ಲಿರುವ ಕಂದಕದಲ್ಲಿ ಭಾಗಶಃ ಹೂಳು ತುಂಬಿದ್ದು ಇತ್ತೀಚೆಗೆ ಸುರಿದ ಮಳೆಗೆ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.

ಕಂದಕದಲ್ಲಿ ತ್ಯಾಜ್ಯ ಬಿಸಾಡುವುದು, ಕಟ್ಟಡದ ಅವಶೇಷಗಳನ್ನು ಹಾಕುವುದರಿಂದ ನೀರು ಮಲಿನಗೊಂಡಿದ್ದು ದುರ್ವಾಸನೆ ಬೀರುತ್ತಿದೆ. ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ.

ಕಂದಕದ ಮುಂಭಾಗದ ಮುಖ್ಯರಸ್ತೆಯು ಕಿಲ್ಲಾ, ಸಂತೆ ಬಜಾರ್‌ಗೆ ಸಂಪರ್ಕ ಕಲ್ಪಿಸಲಿದ್ದು, ಬೈಕ್ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಕಂದಕದ ತ್ಯಾಜ್ಯ ತೆರವಿಗೆ ಕ್ರಮ ಕೈಗೊಳ್ಳಬೇಕು. ಕಸ, ಕಟ್ಟಡದ ಅವಶೇಷಗಳನ್ನು ಬಿಸಾಡದಂತೆ ಎಚ್ಚರಿಕೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net