

ರಟ್ಟಿಹಳ್ಳಿ: ಆ. 17ರಂದು ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಎಲ್ಲ ವಾರ್ಡ್ಗಳಲ್ಲಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಪಕ್ಷದ ಹೈಕಮಾಂಡ್ನೊಂದಿಗೆ ರ್ಚಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥಗೌಡ ಶಿವಣ್ಣನವರ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ರಟ್ಟಿಹಳ್ಳಿಯಲ್ಲಿ ಜೆಡಿಎಸ್ ಪಕ್ಷದ ಮೂಲ ಕಾರ್ಯಕರ್ತರಿದ್ದು, ಅವರೆಲ್ಲರೂ ಪಕ್ಷದ ವತಿಯಿಂದ ಸ್ಪರ್ಧಿಸುತ್ತೇವೆ ಎಂದು ಮನವಿ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಹೈಕಮಾಂಡ್ ನಿರ್ದೇಶನದಂತೆ ಚುನಾವಣೆ ಎದುರಿಸಲಿದೆ ಎಂದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌನೇಶ ಕುಮಾರ, ಜಿಲ್ಲಾ ಉಪಾಧ್ಯಕ್ಷ ಸತೀಶ ಮಾಳದಕರ, ಬಸನಗೌಡ ಸಿದ್ದಪ್ಪಗೌಡ್ರು, ಹನುಮಂತಪ್ಪ ಬ್ಯಾಡಗಿ, ಮುಸ್ತಫಾ ದೊಡ್ಡಮನಿ, ಸಾಧಿಕ್ ಮುಲ್ಲಾ, ಸಿರಾಜ ಮುಲ್ಲಾ, ದಾದಾಪೀರ ಕೂಲಂಬಿ, ಬಸನಗೌಡ ದೊಡ್ಡಬಸಪ್ಪಳವರ, ಆರ್.ಬಿ. ಪಾಟೀಲ, ಅಲ್ತಾಪ ನದಾಫ್, ಚನ್ನವೀರಪ್ಪ ಬಡಿಗೇರ ಇತರರು ಇದ್ದರು.