

-ಸರ್ಕಾರದ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ರೈತ ಸಂಘಟನೆಗಳು
ಬೆಳಗಾವಿ: ಸತ್ತಿಗೇರಿ ಏತ ನೀರಾವರಿ, ಕಳಸಾ ಬಂಡೂರಿ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ನಿರ್ಲಕ್ಷ್ಯ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ವಿವಿಧ ಗ್ರಾಮಗಳಲ್ಲಿನ ರೈತರು ಸುಮಾರು 75ಕಿಮೀ ಪಾದಯಾತ್ರೆ ನಡೆಸಲು ಸಜ್ಜಾಗಿದ್ದಾರೆ.
ಡಿಸೆಂಬರ್ 4 ರಿಂದ ಸುವರ್ಣ ವಿಧಾನಸೌದದಲ್ಲಿ ಚಳಿಗಾಲ ಅಧಿವೇಶನ ಆರಂಭವಾಗುತ್ತಿರಯವ ಹಿನ್ನೆಲೆ ಡಿಸೆಂಬರ್ 3ರಂದು ಬೆಳಗ್ಗೆ 5ಗಂಟೆಗೆ ಯರಗಟ್ಟಿ ರಾಯಣ್ಣ ವೃತ್ತದಿಂದ ಆರಂಭವಾಗಿ ಹಲಕಿ, ಚಚಡಿ, ನೇಸರಗಿ, ಕರಡಿಗುದ್ದಿ, ಮಾರಿಹಾಳ, ಸಾಂಬ್ರಾ, ಬೆಳಗಾವಿ ಗಾಂಧಿ ನಗರದ ಮೂಲಕ ಸುವರ್ಣ ಸೌಧವರೆಗೆ ರೈತರು ಪಾದಯಾತ್ರೆ ನಡೆಯಲಿದೆ.
ಈ ಪಾದಯಾತ್ರೆಯಲ್ಲಿ ಸವದತ್ತಿ, ಬೈಲಹೊಂಗಕ, ರಾಮದುರ್ಗ, ಕಿತ್ತೂರು ತಾಲೂಕಿನ ಸುಮಾರು 70 ಹಳ್ಳಿಗಳಿಂದ ನೂರಾರು ರೈತರು ಪಾದಯಾತ್ರೆ ಯಲ್ಲಿ ಭಾಗವಹಿಸುತ್ತಿದ್ದಾರೆ.
...
ಹೇಳಿಕೆ
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಯರಗಟ್ಟಿಯಿಂದ ಸುವರ್ಣಸೌಧ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತ ಹಾಗೂ ಎಸ್ ಪಿ ಅವರಿಗೆ ಪಾದಯಾತ್ರೆ ನಡೆಸುವ ಕುರಿತು ಮನವಿ ಸಲ್ಲಿಸಿದ್ದೇವೆ.
-ಸೋಮು ರೈನಾಪುರ, ರೈತ ಸಂಘಟನೆ ಮುಖಂಡ