

-ಸರ್ಕಾರದ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ರೈತ ಸಂಘಟನೆಗಳು
ಬೆಳಗಾವಿ: ಸತ್ತಿಗೇರಿ ಏತ ನೀರಾವರಿ, ಕಳಸಾ ಬಂಡೂರಿ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ನಿರ್ಲಕ್ಷ್ಯ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ವಿವಿಧ ಗ್ರಾಮಗಳಲ್ಲಿನ ರೈತರು ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ಪಾದಯಾತ್ರೆ ಕೈಗೊಂಡ ರೈತರು.
ಡಿಸೆಂಬರ್ 4 ಸುವರ್ಣ ವಿಧಾನಸೌದಲ್ಲಿ ಚಳಿಗಾಲ ಅಧಿವೇಶನ ಆರಂಭವಾಗುತ್ತಿರಯವ ಹಿನ್ನೆಲೆ ಭಾನುವಾರ ಬೆಳಗ್ಗೆ ಯರಗಟ್ಟಿ ರಾಯಣ್ಣ ವೃತ್ತದಿಂದ ಪಾದಯಾತ್ರೆ ಗೆ ವಿವಿಧ ಮಠಾಧೀಶರು ಚಾಲನೆ ನೀಡಿದರು.
ರೈತರ ಪಾದಯಾತ್ರೆಯು ಯರಗಟ್ಟಿ ಯಿಂದ ಆರಂಭಗೊಂಡು ಹಲಕಿ, ಚಚಡಿ, ನೇಸರಗಿ, ಕರಡಿಗುದ್ದಿ, ಮಾರಿಹಾಳ, ಸಾಂಬ್ರಾ, ಬೆಳಗಾವಿ ಗಾಂಧಿ ಮೂಲಕ ಸುವರ್ಣ ಸೌಧಕ್ಕೆ ಡಿ.4ರಂದು ತಲುಪಲಿದೆ.
ಸವದತ್ತಿ, ಬೈಲಹೊಂಗಕ, ರಾಮದುರ್ಗ, ಕಿತ್ತೂರು ತಾಲೂಕಿನ 70 ಹಳ್ಳಿಗಳಿಂದ ನೂರಾರು ರೈತರು ಪಾದಯಾತ್ರೆ ಯಲ್ಲಿ ಭಾಗವಹಿಸಿದ್ದಾರೆ.
ಸೋಮು ರೈನಾಪುರ್. ಜಿಲ್ಲಾಧ್ಯಕ್ಷರು. ರಾಮಕೃಷ್ಣ. ಎಳೆಮ್ಮಿ. ರಂಗಪ್ಪ ಗಂಗರೆಡ್ಡಿ. ಶೇಖರ್ ಕಿಲಾರಿ ಎಕ್ಕರೆಪ್ಪ ತಳವಾರ್. ಚಿದಂಬರ ಕಟ್ಟಿಮನಿ. ಪ್ರಕಾಶ್ ವಾಲಿ. ಸಂಜು ಕುಮಾರ್ ನವಲಗುಂದ್. ಮಾದೇವ ಯಡ್ರಾವಿ. ಶಿವಾನಂದ ಕರಿಗನ್ನವರ್ ಇದ್ದರು.