ರೈತರಿಂದ ಅನಿರ್ದಿಷ್ಟಾವಧಿ ರಾಷ್ಟ್ರೀಯ ಹೆದ್ದಾರಿ ಬಂದ್..

Motebennure Protest
Published on

ಹಾವೇರಿ: ಕೈಗಾರಿಕಾ ಕಾರಿಡಾರ್ ಗೆ ಫಲವತ್ತಾದ ಜಮೀನು ಸ್ವಾಧೀನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಹಾಗೂ ಹೆದ್ದಾರಿ ಕಾಮಗಾರಿ ಪೂರ್ತಿಗೊಳಿಸಲು ಆಗ್ರಹಿಸಿ ರೈತರು ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ಆರಂಭಿಸಿದ್ದಾರೆ.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸಾವಿರಾರು ರೈತರು ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಕೈಗಾರಿಕಾ ಕಾರಿಡಾರ್ ಗಾಗಿ ಕೆಐಎಡಿಬಿ 1,017,17 ಎಕರೆ ಜಮೀನು ಸ್ವಾಧೀನಕ್ಕೆ ಮುಂದಾಗಿದೆ. ಈ ಜಮೀನಿನ ಮಾಲೀಕರ ಅನುಮತಿ ಪಡೆಯದೇ ಏಕಾಏಕಿ ನೋಟಿಸ್ ನೀಡಿದೆ. ಅಲ್ಲದೇ ಈ ಜಮೀನಿನ ಮೇಲೆ ಯಾವುದೇ ವ್ಯವಹಾರ, ಸಾಲ ಮಾಡದಂತೆ ತಡೆಯೊಡ್ಡಿದೆ.

ಈ ಸಮಸ್ಯೆ ಬಗೆಹರಿಸುವಂತೆ ರೈತರು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಗಡವು ನೀಡಿದ್ದರು. ಗಡವು ಮುಕ್ತಾಯವಾದ ಬೆನ್ನಲ್ಲೇ ಇಂದು ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ಆರಂಭಿಸಿದ್ದಾರೆ.

ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ, ಅಳಲಗೇರಿ, ಅರಬಗೊಂಡ, ಸುತ್ತಮುತ್ತಲಿನ ರೈತರು ಪಾಲ್ಗೊಂಡಿದ್ದಾರೆ.

ಇದರಿಂದ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಸಾರಿಗೆ ಬಸ್ ಗಳ ಮಾರ್ಗವನ್ನು ಸಾರಿಗೆ ಸಂಸ್ಥೆ ಬದಲಾಯಿಸಿದೆ. ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net