ಮದುವೆ ಮನೆಯಲ್ಲಿ ಗುಂಡಿನ ಮಳೆಗೈದ ಮಾಜಿ ಸೈನಿಕ; ಸಂಬಂಧಿಕರು ಶಾಕ್, ದಾಖಲಾಯ್ತು ಕೇಸ್!

gunpic
Published on

ಚಿಕ್ಕೋಡಿ: ಮದುವೆ ಸಮಾರಂಭದಲ್ಲಿ ಮಾಜಿ ಸೈನಿಕನೋರ್ವ ಬಂದೂಕಿನಿಂದ ಗುಂಡಿನ ಮಳೆಗೈದಿದ್ದು, ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ರಫಿಕ್ ಅಹಮ್ಮದ ತಹಶೀಲ್ದಾರ ಎಂಬ ಮಾಜಿ ಸೈನಿಕ ಮದುವೆ ಸಮಾರಂಭದ ವೇದಿಕೆಯಲ್ಲೇ ಗುಂಡು ಹಾರಿಸಿದ್ದಾನೆ.

ಮದುವೆ ಸಮಾರಂಭದ ಖುಷಿಯಲ್ಲಿ ತನ್ನ ಲೈಸೆನ್ಸ್ ಪಿಸ್ತೂಲಿನಿಂದ ಗಾಳಿಯಲ್ಲಿ 5 ಸುತ್ತು ಗುಂಡು ಹಾರಿಸಿದ್ದಾನೆ. ಮಾಜಿ ಸೈನಿಕನ ಹುಚ್ಚಾಟದಿಂದ ಮದುವೆಗೆ ಆಗಮಿಸಿದ್ದ ಸಂಬಂಧಿಗಳು ಕೆಲಕಾಲ ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿದ ಹುಕ್ಕೇರಿ ಪೊಲೀಸರು ಸೊಮೋಟೋ‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net