ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಬಳಗದಿಂದ ಉಚಿತವಾಗಿ ಎಂ.ಬಿ.ಬಿ.ಎಸ್. ಸೀಟ್ ಪಡೆದ ಪೌರ ಕಾರ್ಮಿಕರ ಪುತ್ರನಿಗೆ ಸನ್ಮಾನ

ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಬಳಗದಿಂದ ಉಚಿತವಾಗಿ ಎಂ.ಬಿ.ಬಿ.ಎಸ್. ಸೀಟ್ ಪಡೆದ ಪೌರ ಕಾರ್ಮಿಕರ ಪುತ್ರನಿಗೆ ಸನ್ಮಾನ
Published on

ಉಚಿತವಾಗಿ ಎಂ.ಬಿ.ಬಿ.ಎಸ್. ಸೀಟ್ ಪಡೆದಿರುವ ವಸಂತ್ ನಗರ ಬಡಾವಣೆಯ ಪೌರ ಕಾರ್ಮಿಕರಾದ ರಂಗ, ದೀಪು ದಂಪತಿಯ ಪುತ್ರ ಮದನ್ ಕುಮಾರ್ ಅವರನ್ನು ಶುಕ್ರವಾರ ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ನಿವೇದಿತಾ ನಗರದ ಸುಬ್ಬರಾವ್ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಸನ್ಮಾನಿಸಿದರು. ಜೆ.ಎಸ್.ಜಗದೀಶ್ ಮಾತನಾಡಿ, ಓದಿನಲ್ಲಿ ಸಾಧಿಸುವ ಛಲ ಇರಬೇಕು. ಆಗ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ. ಪ್ರತಿಯೊಬ್ಬರಿಗೂ ಬದುಕಿನಲ್ಲಿ ಗುರಿ ಇರಬೇಕು. ಅದನ್ನು ತಲುಪುವ ಮನೋಭೂಮಿಕೆ ಸಿದ್ಧಪಡಿಸಿಕೊಂಡು ಪ್ರಯತ್ನಶೀಲರಾಗಬೇಕು. ನಮ್ಮ ಮದನ್ ಕುಮಾರ್ ಅವರಿಗೆ ಓದಿನಲ್ಲಿ ಛಲ ಮತ್ತು ಶ್ರದ್ಧ ಎರಡೂ ಇದ್ದ ಕಾರಣ ಇಂದು ಉಚಿತವಾಗಿ ವೈದ್ಯಕೀಯ ಶಿಕ್ಷಣದ ಸೀಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಸೌಲಭ್ಯ ಇಲ್ಲದಿದ್ದರೂ ಕಷ್ಟಪಟ್ಟು ಓದಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಪ್ರಮುಖರಾದ ಸತ್ಯಾನಂದ ವಿಟು, ಪ್ರೊ.ನಾಗರಾಜ್, ಪ್ರೊ.ಗೋವಿಂದೇಗೌಡ, ನೀಲಕಂಠನಹಳ್ಳಿ ತಮ್ಮಣ್ಣ ಗೌಡ, ರಾಮಲಿಂಗೇಗೌಡ, ಸಿದ್ದೇಗೌಡ, ಮಧು ಯಶಸ್ವಿನಿ ಸೋಮಶೇಖರ್, ಲೋಹಿತ್ ಶರ್ಮ, ವಸಂತ್ ನಗರ ಬಡಾವಣೆಯ ಯಜಮಾನರಾದ ನಾಗರಾಜು, ಹರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net