

ಗಂಗಾವತಿ: ಆನೆಗೊಂದಿ ಭಾಗದಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಅಧಿವೇಶನದಲ್ಲಿ ತಪ್ಪು ಮಾಹಿತಿ ನೀಡಿದ ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿಕೆ ಖಂಡನೀಯ. ಐತಿಹಾಸಿಕ ಪ್ರದೇಶವನ್ನು ಅವಮಾನಿಸಿದ ರಾಯರಡ್ಡಿಯನ್ನು ಪಕ್ಷದಿಂದ ಉಚ್ಛಾಟಿಸುವಂತೆ ಕೆಪಿಸಿಸಿಗೆ ಪತ್ರ ಬರೆಯಲಾಗುವುದು ಎಂದು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹೇಳಿದರು.
ನಗರದ ಎಚ್‌ಆರ್‌ಜಿ ನಿವಾಸದಲ್ಲಿ ಆನೆಗೊಂದಿ, ಸಣಾಪುರ ಭಾಗದ ರೆಸಾರ್ಟ್ ಮಾಲೀಕರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಪುಣ್ಯಕ್ಷೇತ್ರಗಳಲ್ಲಿ ಯಾವುದೇ ಡ್ರಗ್ಸ್ ವಹಿವಾಟು ನಡೆದಿರುವ ಬಗ್ಗೆ ಮಾಹಿತಿಯಿಲ್ಲ. ರೆಸಾರ್ಟ್, ರೆಸ್ಟೋರೆಂಟ್‌ಗಳನ್ನು ವಿರೋಧಿಸುವ ಭರದಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ.
ಮದ್ಯ ಮತ್ತು ಮಾದಕವಸ್ತುಗಳ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿ. ಸದನದಲ್ಲಿ ಶಾಸಕ ಜನಾರ್ದನ ರೆಡ್ಡಿ ಪ್ರಶ್ನಿಸಿರುವುದು ಸ್ವಾಗತಾರ್ಹವಾಗಿದ್ದು, ವಾಸ್ತವಿಕತೆ ಬಗ್ಗೆ ಸರ್ಕಾರ ಮತ್ತು ಕೆಪಿಸಿಸಿ ಗಮನಕ್ಕೆ ತರಲಾಗುವುದು ಎಂದರು.
ಕೆಆರ್‌ಪಿಪಿ ಮುಖಂಡ ಪಂಪಾಪತಿ ಸಿಂಗನಾಳ್ ಮಾತನಾಡಿ, ರೈತರ ಅದಾಯ ಹೆಚ್ಚಲು ಾರ್ಮ್ ಸ್ಟೇ ನಿರ್ಮಾಣಕ್ಕೆ ಸರ್ಕಾರ ಅವಕಾಶ ನೀಡಬೇಕಿದ್ದು, ಮಾಜಿ ಸಚಿವ ಬಸವರಾಜ ರಾಯರಡ್ಡಿ ಆಕ್ಷೇಪಾರ್ಹ ಹೇಳಿಕೆ ಪಕ್ಷಾತೀತವಾಗಿ ಖಂಡಿಸಲಾಗುವುದು ಎಂದರು. ಕಾಂಗ್ರೆಸ್ ಮುಖಂಡರಾದ ರಾಜಶೇಖರ ಮುಷ್ಟೂರು, ಸುರೇಶ ಗೌರಪ್ಪ, ಸೈಯ್ಯದ್ ನಾಜನೀನ್, ಹನುಮಂತರಾಯ ಇತರರಿದ್ದರು.
ಪ್ರವಾಸೋದ್ಯಮ ಬೆಳೆಯಬೇಕಾದರೆ ಆನೆಗೊಂದಿ, ಸಣಾಪುರ ಭಾಗದಲ್ಲಿ ಫಾರ್ಮ್ ಸ್ಟೇಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಬೇಕು. ಇತ್ತೀಚಿಗೆ ರೆಸಾರ್ಟ್, ರೆಸ್ಟೋರೆಂಟ್‌ಗಳನ್ನು ತೆರವುಗೊಳಿಸಿದ್ದರಿಂದ ಅನೇಕ ಕುಟುಂಬಗಳು ಬೀದಿ ಪಾಲಾಗಿದ್ದು, ಪ್ರವಾಸಿಗರಿಗೂ ವಸತಿ ಮತ್ತು ಆಹಾರದ ವ್ಯವಸ್ಥೆ ಸಿಗುತ್ತಿಲ್ಲ. ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ.ಎಚ್.ಆರ್.ಶ್ರೀನಾಥಮಾಜಿ ಎಂಎಲ್ಸಿ