ದಯಮಾಡಿ ಮನೆ ಬಿಟ್ಟು ಬರಬೇಡಿ

TUNNURU
Published on

ಯಾದಗಿರಿ: ಹಿಂದೆಂದು ಕಾಣದ ರೋಗದಿಂದ ಬಾಧಿತವಾಗಿದ್ದು, ಜನತೆ ಕರೊನಾ ವೈರಸ್ ಬಗ್ಗೆ ಆತಂಕಗೊಳ್ಳದೆ ಮನೆಯಲ್ಲೇ ಇರುವಂತೆ ಮಾಜಿ ಎಂಎಲ್ಸಿ ಚೆನ್ನಾರಡ್ಡಿ ಪಾಟೀಲ್ ತುನ್ನೂರ ಸಲಹೆ ನೀಡಿದರು.

ನಗರದ ವಾರ್ಡ್​ ನಂ.6ರ ವ್ಯಾಪ್ತಿಯ ಬಡ ಜನತೆಗೆ ಪಲಾವ್ ಹಾಗೂ ಶುದ್ಧ ಕುಡಿವ ನೀರು ವಿತರಿಸಿ ಮಾತನಾಡಿದ ಅವರು, ಈ ವೈರಸ್ ನಿಯಂತ್ರಣಕ್ಕಾಗಿ ನಾವೆಲ್ಲ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಆಗಾಗ ನಮ್ಮ ಕೈಗಳನ್ನು ತೊಳೆದುಕೊಳ್ಳುವುದು. ಕಡ್ಡಾಯವಗಿ ಮಾಸ್ಕ್ ಧರಿಸಬೇಕು ಎಂದರು.

ಅನಗತ್ಯವಾಗಿ ಯಾರೂ ಮನೆಬಿಟ್ಟು ಹೊರಗಡೆ ಬರಕೂಡದು. 14ರ ನಂತರವೂ ಅವಶ್ಯಕತೆ ಬಿದ್ದರೆ ನಗರ ಸೇರಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಬಡವರಿಗೆ ದಿನ ಬಳಕೆಗೆ ಅಗತ್ಯವಾದ ವಸ್ತುಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ತುನ್ನೂರ ತಿಳಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೆಪ್ಪ ಬಿಳ್ಹಾಳ, ಹಿರಿಯ ಪತ್ರಕರ್ತ ಅಯ್ಯಣ್ಣ ಹುಂಡೇಕಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net