

ಬೆಂಗಳೂರು: ಮದುವೆ ಋತು ಆರಂಭವಾಗಿರುವ ಸಂದರ್ಭದಲ್ಲೇ ವಧು-ವರರನ್ನು ಆಕರ್ಷಿಸಲು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಏಷ್ಯಾ ವೆಡ್ಡಿಂಗ್ ಶೋ-2023 ಆರಂಭವಾಗಿದ್ದು, ಇದಕ್ಕೆ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಶುಕ್ರವಾರ ಚಾಲನೆ ನೀಡಿದರು.
ಮೂರು ದಿನಗಳ ಕಾಲ ನಡೆಯುವ ಮೇಳದಲ್ಲಿ ಮೈಮನಗಳನ್ನು ತಣಿಸುವ ಅತ್ಯಾಕರ್ಷಕ ವಡವೆ, ವಸ್ತ್ರ, ಬಣ್ಣ ಬಣ್ಣದ ಅಲಂಕಾರಿಕ ವಸ್ತುಗಳನ್ನೊಳಗೊಂಡ ಬಂಢಾರ ಅನಾವರಣಗೊಂಡಿದೆ.
ಸೆ. 8ರಿಂದ 10 ರ ವರೆಗೆ ಬೆಳಿಗ್ಗೆ ೧೦.೩೦ ರಿಂದ ರಾತ್ರಿ ೮ ಗಂಟೆವರೆಗೆ ಪ್ರದರ್ಶನ ಇರಲಿದ್ದು, ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಈ ವೇಳೆ ಸೌಮ್ಯ ರೆಡ್ಡಿ ಮಾತನಾಡಿ, ಇದು ನಿಜಕ್ಕೂ ಕಣ್ಮನ ಸೆಳೆಯುವ ಮದುವೆ ಉತ್ಸವವಾಗಿದ್ದು, ಪ್ರತಿಯೊಂದು ವಸ್ತುಗಳು ಇಲ್ಲಿ ಲಭ್ಯವಿದೆ. ಜೀವನದಲ್ಲಿ ಮದುವೆ ಅತ್ಯಂತ ಸಂಭ್ರಮ ತರುತ್ತದೆ. ಇಂತಹ ಮಾರಾಟ ಮತ್ತು ಪ್ರದರ್ಶನ ಮೇಳ ಸಡಗರ-ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆಚರಣೆಗಳನ್ನು ಅರ್ಥಪೂರ್ಣಗೊಳಿಸುತ್ತದೆ. ಇಂತಹ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದರು.
ಮೇಳದಲ್ಲಿ ಏನೆಲ್ಲ ಲಭ್ಯವಿದೆ:
ಚಿನ್ನ ಲೇಪಿತ ಗೋಡೆ ಗಡಿಯಾರ, ಬೆಳ್ಳಿ ಒನಕೆ, ಸಾಂಪ್ರದಾಯಿಕ ವಸ್ತುಗಳು, ಟ್ರೆಂಡಿ ಆಭರಣಗಳು, ವಧುವಿಗೆ ಬೇಕಾಗುವ ಕಾಂಚಿಪುರಂ, ಬನಾರಸ್ ಮತ್ತಿತರ ರೇಷ್ಮೇ ಸೀರೆಗಳು, ಅಮೂಲ್ಯ ಕಲ್ಲುಗಳು ಮತ್ತು ಹರಳುಗಳು, ಮದುವೆ ಆಯೋಜಕರ ನೆರವು, ಮದುವೆ ಚಿತ್ರೀಕರಣಕ್ಕೆ ವ್ಯವಸ್ಥೆ, ಆಕರ್ಷಕ ಮದುವೆ ಉಡುಗೊರೆಗಳು ಹೀಗೆ ನಾನಾ ರೀತಿಯ ಸೇವೆ ಮತ್ತು ಸೌಕರ್ಯಗಳು ಈ ಮೇಳದಲ್ಲಿ ದೊರೆಯುತ್ತಿವೆ. ಮದುವೆಯನ್ನು ಅತ್ಯಂತ ಸುಗಮ ಮತ್ತು ಸುಲಲಿತಗೊಳಿಸುವ ವಿಶಿಷ್ಟವಾದ ಮೇಳ ಇದಾಗಿದೆ. ದೇಶದ ಪ್ರಮುಖ ಚಿನ್ನಾಭರಣ ಮಾರಾಟಗಾರರು ಮೇಳದಲ್ಲಿ ಭಾಗಿಯಾಗಿದ್ದು, ವಧುವಿಗೆ ಬೇಕಾಗಿರುವ ತಾಳಿ, ಕಾಲುಂಗರ, ನಕ್ಲೇಸ್, ವರನಿಗೆ ಅಗತ್ಯವಾಗಿರುವ ಚಿನ್ನಾಭರಣ ಖರೀದಿಗೆ ಇದು ಸೂಕ್ತ ವೇದಿಕೆಯಾಗಿದೆ. ಜೊತೆಗೆ ಐಶಾರಾಮಿ ಬ್ರ್ಯಾಂಡ್‌ಗಳು ಸಹ ಇರಲಿದೆ.
ಆಭರಣ ಮಾರಾಟಗಾರರು ಭಾಗಿ:
ರಾಜಾಜಿನಗರದ ಶ್ರೀಗಣೇಶ್ ಡೈಮಂಡ್ ಆ್ಯಂಡ್ ಜುವೆಲ್ಲರಿ, ಸಮ್ಯಕ್, ಪೋಥಿಸ್, ಕೀರ್ತಿಲಾಲ್, ಪಿಎಂಜೆ, ನವರತನ್, ನಿಖಾಹಾರ್, ಎಂ.ಪಿ., ನಿರ್ಮಲ್, ರಾಯಲ್ ಆರ್ಕಿಡ್ಸ್, ಲೌಕ್ಯಾ, ಗಿರಿರಾಜ್, ಸಿಂಹ, ಬೇಗಮ್ಸ್ ಬೈ ರಷ್ಮಿ, ಪನ್ನಾ, ಆಕಾರ್ ಕ್ರಿಯೇಷನ್ಸ್, ವಂಡರ್ ಡೈಮಂಡ್ಸ್, ಶೈನಿ, ಸಪ್ರೋಶಿ, ರಾಜಾ ಟೈಮ್ಲೆಸ್ ಮತ್ತಿತರೆ ಆಭರಣ ಮಾರಾಟಗಾರರು ಮೇಳದಲ್ಲಿ ಭಾಗವಹಿಸಿದ್ದಾರೆ.