

ಮುದ್ದೇಬಿಹಾಳ:ಸಾಲ ಬಾಧೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡು ಪ್ರಕರಣ ದಾಖಲಾದರೂ, ಸೌಜನ್ಯಕ್ಕಾದರೂ ಒಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸದೆ ಇರುವುದು ದುರಾಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮುದ್ದೇಬಿಹಾಳ ತಾಲೂಕು ಕುಂಟೋಜಿ ಗ್ರಾಮದ ರೈತ ಸಂಗಪ್ಪ ಲಕ್ಕಪ್ಪ ಗೌಡರ (ಬೊಮ್ಮಣಗಿ) ಅವರ ಮನೆಗೆ ಮಂಗಳವಾರ ನಡಹಳ್ಳಿಯವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಮಾತನಾಡಿದ ಅವರು, ಸ್ಥಳಿಯ ಶಾಸಕರು ಮೃತ ರೈತ ಕುಟುಂಬಕ್ಕೆ ವಿಶೇಷ ಸೂಕ್ತ ಪರಿಹಾರ ಕೊಡಿಸುವ ಮೂಲಕ ರೈತನ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಆತನ ಮಕ್ಕಳಿಗೆ ಸರ್ಕಾರದಿಂದ ಪಿಂಚಣಿ ಹಣ ಬರುವಂತೆ ಹಾಗೂ ಉಚಿತ ಶಿಣ ಕೊಡಿಸುವಲ್ಲಿ ಮುಂದಾಗಬೇಕು ಎಂದು ಆಗ್ರಹಿಸಿದರು.
ಯಾರ ಅಧಿಕಾರವೂ ಶಾಶ್ವತವಲ್ಲ, ಅಧಿಕಾರ ಇರುತ್ತೇ ಹೋಗುತ್ತೆ. ಆದರೆ ರೈತ ಮಾತ್ರ ಶಾಶ್ವತನಾಗಿರುತ್ತಾನೆ ಅನ್ನೋದನ್ನು ಅಧಿಕಾರದಲ್ಲಿದ್ದವರು ಅರ್ಥೈಸಿಕೊಳ್ಳಬೇಕು. ಸದ್ಯ ಮೃತ ರೈತ ಸಂಗಪ್ಪ ಲಕ್ಕಪ್ಪ ಗೌಡರ (ಬೊಮ್ಮಣಗಿ) ಅವರ ಅಂದಾಜು 6 ಲಗಳ ವಿವಿಧ ಬ್ಯಾಂಕುಗಳಲ್ಲಿ, ಸಹಕಾರಿ ಸಂಗಳಲ್ಲಿ, ಸಾಲ ಪಡೆದಿದ್ದ. ತಾನು ಬೆಳೆದ ಮೆಕ್ಕೆ ಜೋಳ, ಈರುಳ್ಳಿ ಬೆಳೆಗಳು ಅತಿವೃಷ್ಟಿಯಿಂದ ಸಂಪೂರ್ಣ ನಾಶಗೊಂಡ ಹಿನ್ನೆಲೆಯಲ್ಲಿ ಧೈರ್ಯ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಇಡಿ ರೈತ ಕುಟುಂಬಕ್ಕೆ ನೋವನ್ನುಂಟು ಮಾಡಿದೆ ಎಂದರು.
ನಾನು ಅಧಿಕಾರದಲ್ಲಿಲ್ಲ. ಆದರೂ ಇಂತಹ ಬಡ ರೈತ ಕುಟುಂಬಗಳ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ಈ ನಿಟ್ಟಿನಲ್ಲಿ ಮೃತ ರೈತನ ಮಗಳ ಮದುವೆ ಮಾಡಿಕೊಡುವ ಸಂದರ್ಭದಲ್ಲಿ ಬಂದು ಭೇಟಿಯಾದರೆ ಅಲ್ಪ ಸಹಾಯ ಮಾಡುತ್ತೇನೆ. ಜತೆಗೆ ಪರಿಹಾರ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಇದಕ್ಕೋಸ್ಕರ ನಾನು ಹೋರಾಟಕ್ಕೂ ಸಿದ್ಧನಿದ್ದೇನೆ ಎಂದರು.
ಯಲ್ಲವ್ವ ಲಕ್ಕಪ್ಪ ಗೌಡರ, ಬೋರಮ್ಮ ಸಂಗಪ್ಪ ಗೌಡರ, ಪರಮಾನಂದ ಗೌಡರ, ಹಣಮಂತ ಗೌಡರ, ಮಲ್ಲಿಕಾರ್ಜುನ ನಾಟಿಕಾರ, ಬಸವರಾಜ ಹುಲಗಣ್ಣಿ, ರಾಮಣ್ಣ ಹುಗಣ್ಣಿ, ಗಣೇಶ ಹೆಬ್ಬಾಳ, ಗುರುಲಿಂಗಪ್ಪ ಸುಲ್ಲಳ್ಳಿ, ನಾಗಲಿಂಗಯ್ಯಾ ಮಠ, ಬಿಜೆಪಿ ತಾಲೂಕು ಮಂಡಲದ ಅಧ್ಯ ಜಗದೀಶ ಪಂಪಣ್ಣ ಇತರರಿದ್ದರು.
ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಮೃತ ರೈತ ಸಂಗಪ್ಪ ಲಕ್ಕಪ್ಪ ಗೌಡರ (ಬೊಮ್ಮಣಗಿ) ಅವರ ಮನೆಗೆ ಮಂಗಳವಾರ ಮಾಜಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.