ಸರ್ಕಾರದ ಅನುದಾನ ಲಪಟಾಯಿಸುವ ಕಾರ್ಯ

Untitled design (6)
Published on

ಮಾನ್ವಿ: ಪಟ್ಟಣದ ಬಸವ ವೃತ್ತದಿಂದ ಪುರಸಭೆವರೆಗೆ ಸಿಸಿ ರಸ್ತೆ ಕಾಮಗಾರಿ ಅನುಮೋದನೆ ಪ್ರತಿಯನ್ನು ತೋರಿಸಲು ಆಗ್ರಹಿಸಿ ಬಿಜೆಪಿ ತಾಲೂಕು ಘಟಕದಿಂದ ಪಟ್ಟಣದ ತಹಸಿಲ್ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿತು.

ಸಿಸಿ ರಸ್ತೆ ಕಾಮಗಾರಿಯನ್ನು ಕೆಕೆಆರ್‌ಡಿಬಿ ಎಸ್‌ಸಿಪಿ ಅನುದಾನದಲ್ಲಿ ಮಾಡಲಾಗುತ್ತಿದೆ. ಯೋಜನೆಗೆ ಸಂಭಂದ ಪಟ್ಟ ದಾಖಲೆಗಳನ್ನು ತೋರಿಸಬೇಕು. ನಂತರ ಸಿಸಿ ರಸ್ತೆ ಕಾಮಗಾರಿ ಮಾಡಬೇಕು ಎಂದು ಮಾಜಿ ಶಾಸಕ ಗಂಗಾಧರ ನಾಯಕ ಪಟ್ಟು ಹಿಡಿದರು.

ಈಗಾಗಲೇ ಬಸವ ವೃತ್ತದಿಂದ ಪುರಸಭೆ ವೆರಗೆ ಸಿಸಿ ರಸ್ತೆ ಉತ್ತಮವಾಗಿದೆ. ಆದರೂ ಕಾಮಗಾರಿ ನಡೆಸುತ್ತಿರುವುದು ಎಷ್ಟು ಸರಿ. ಎಸ್‌ಸಿಪಿ ಅನುದಾನವನ್ನು ಪರಿಶಿಷ್ಟರ ಏರಿಯಾಗಳಲ್ಲಿ ರಸ್ತೆ ಮಾಡಬೇಕು. ಈ ರಸ್ತೆ ಕಾಮಗಾರಿ ಸರ್ಕಾರದ ಅನುದಾನ ಲಪಟಾಯಿಸುವ ಕಾರ್ಯ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಅಯ್ಯಪ್ಪ ಮ್ಯಾಕಲ್ ಮಾತನಾಡಿ, ಸಿಸಿ ರಸ್ತೆ ಕಾಮಗಾರಿ ಯಾವ ಅನುದಾನದಲ್ಲಿ ಬಳಸಲಾಗಿದೆ ಎಂಬುದು ಅಧಿಕಾರಗಳು ದೃಢಪಡಿಸಬೇಕು. ಅಲ್ಲಿಯವರೆಗೆ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿದರು.

ಲೋಕೋಪಯೋಗಿ ಇಲಾಖೆ ಎಇಇ ಸ್ಯಾಮುಯೆಲ ಮಾತನಾಡಿ, ಸಿಸಿ ರಸ್ತೆ ಕಾಮಗಾರಿ ಎಸ್‌ಡಿಪಿ ಸಾಮಾನ್ಯ ಯೋಜನೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಎಸ್‌ಸಿಪಿ ಅನುದಾನ ಅಲ್ಲ ಎಂದರು ಸಮಜಾಯಿಷಿ ನೀಡಿದರು. ತಹಸೀಲ್ದಾರ್ ರಾಜು ಪಿರಂಗಿದೆ ಮನವಿ ಸಲ್ಲಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಸುಧಾಕರ್, ಮುಖಂಡರಾದ ನರಸಿಂಹನಾಯಕ ಕರಡಿಗುಡ್ಡ, ಹನುಮೇಶ ನಾಯಕ ಸಾದಪುರ, ಶಿವಲಿಂಯ್ಯಸ್ವಾಮಿ, ಜಗದೀಶ ಓತೂರು, ವಿರೇಶನಾಯಕ ಬೆಟ್ಟದೂರು,ಆರ್.ಸುಭಾಷ್ಚಂದ್ರ, ಬುಡ್ಡಪ್ಪನಾಯಕ, ಎಂ.ವೀರನಗೌಡ ವಕೀಲ, ಹನುಮಂತಪ್ಪನಾಯಕ ವಕೀಲ, ಮಲ್ಲಿಕಾರ್ಜುನಗೌಡ, ಗುರುಗೌಡ, ಕುಮಾರಸ್ವಾಮಿ ಮೇದಾ, ಮಲ್ಲಭದ್ರಗೌಡ, ರಾಮಕೃಷ್ಣ, ಬಸವಪ್ರಭು, ವೆಂಕಟೇಶನಾಯಕ, ಉಮಾಪತಿನಾಯಕ, ರಾಹುಲ್, ಈರಣ್ಣನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net