ನಾಗೇನಹಳ್ಳಿಗೆ ಮಾಜಿ ಶಾಸಕ ಡಿ.ಎಸ್.ಸುರೇಶ್ ಭೇಟಿ

17 TKE 1
ನಾಗೇನಹಳ್ಳಿ ಗ್ರಾಮಕ್ಕೆ ಮಾಜಿ ಶಾಸಕ ಡಿ.ಎಸ್.ಸುರೇಶ್ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚಿಸಿದರು. ಕೆ.ಆರ್.ಧ್ರುವಕುಮಾರ್, ಕೆ.ಆರ್.ಆನಂದಪ್ಪ, ಶಿವಕುಮಾರ್ ಇತರರಿದ್ದರು.
Published on

ತರೀಕೆರೆ: ಸರ್ಕಾರಿ ಜಾಗದ ವಿಚಾರದಲ್ಲಿ ಘರ್ಷಣೆ ನಡೆದ ನಾಗೇನಹಳ್ಳಿ ಗ್ರಾಮಕ್ಕೆ ಮಾಜಿ ಶಾಸಕ ಡಿ.ಎಸ್.ಸುರೇಶ್ ಶುಕ್ರವಾರ ಭೇಟಿ ನೀಡಿದರು.
ಎರಡು ಕೋಮಿನ ನಡುವೆ ನಡೆದ ಗಲಾಟೆಯಿಂದ ಗ್ರಾಮದಲ್ಲಿ ಬೀಗುವಿನ ವಾತಾವರಣ ನಿರ್ಮಾಣವಾಗಿದೆ. ಗ್ರಾಮಸ್ಥರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಮಹಿಳೆಯರ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ಲಾಠಿ ಪ್ರಹಾರದ ವೇಳೆ ಪೊಲೀಸರಿಂದ ಹಲ್ಲೆಗೊಳಗಾದ ವೃದ್ಧರು ಮತ್ತು ಮಹಿಳೆಯರ ಜತೆ ಸಮಾಲೋಚನೆ ನಡೆಸಿದರು.
ಮಹಿಳೆಯರ ಮೇಲೆ ಹಲ್ಲೆ ನಡೆಸಿರವುದನ್ನು ಕಂಡು ಆಕ್ರೋಶಗೊಂಡ ಮಾಜಿ ಶಾಸಕರು ಡಿವೈಎಸ್‌ಪಿ ಡಾ.ಹಾಲಮೂರ್ತಿ ರಾವ್‌ಗೆ ಕರೆ ಮಾಡಿ, ಎರಡು ಕೋಮುಗಳ ನಡುವಿನ ಘರ್ಷಣೆ ರಾಜಕೀಯ ತಿರುವು ಪಡೆದುಕೊಳ್ಳುವಂತೆ ಕಂಡುಬರುತ್ತಿದೆ. ವಿನಾ ಕಾರಣ ಅಮಾಯಕ ಮಹಿಳೆಯರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಸರಿಯಲ್ಲ. ತಪ್ಪಿತಸ್ಥ ಪೊಲೀಸರನ್ನು ತಕ್ಷಣ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಪಂ ಅಧ್ಯಕ್ಷ ಮಾಜಿ ಅಧ್ಯಕ್ಷ ಕೆ.ಆರ್.ಧ್ರುವಕುಮಾರ್, ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಶಿವಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net