ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮತದಾನ

Former MLA Doddanagowda Patil voting
ಇಳಕಲ್ಲ ನಗರದ ಸಜ್ಜನ ಪ್ರಾಥಮಿಕ ಶಾಲೆ ಬೂತ್ ನಂ. 158ರಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮತ ಚಲಾಯಿಸಿದರು. ಅವರ ಕುಟುಂಬ ಸದಸ್ಯರು ಇದ್ದಾರೆ.
Published on

ಇಳಕಲ್ಲ : ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ತಮ್ಮ ಪತ್ನಿ ದೇವಮ್ಮ ಪಾಟೀಲ ಹಾಗೂ ಕುಟುಂಬ ಸದಸ್ಯರೊಂದಿಗೆ ಆಗಮಿಸಿ, ನಗರದ ಸಜ್ಜನ ಪ್ರಾಥಮಿಕ ಶಾಲೆಯ ಬೂತ್ ನಂ. 158 ರಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಎಲ್ಲರಿಗೂ ನೀಡಿರುವ ಹಕ್ಕು ಮತದಾನ. ದೇಶದ ಭವಿಷ್ಯಕ್ಕಾಗಿ, ಉತ್ತಮ ನಾಯಕತ್ವ ಆಯ್ಕೆಗಾಗಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿಮಾಡಿದರು.

ಪುತ್ರ ರಾಜುಗೌಡ ಪಾಟೀಲ, ಸೊಸೆ ಅನುಷಾ ರಾಜುಗೌಡ ಪಾಟೀಲ, ಮಕ್ಕಳು ಇದ್ದರು. ಬಿಜೆಪಿ ಮುಖಂಡರಾದ ಆನಂದ ಚಲವಾದಿ, ಬಸು ಅಗರಗೊಂಡ, ಸುನೀಲ್ ಗಿರಡ್ಡಿ, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net