

ಆಲ್ದೂರು: ಆಲ್ದೂರು ಸಮೀಪದ ವಸ್ತಾರೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳು ದಾಳಿ ನಡೆಸಿ ಹಾನಿಗೊಳಗಾದ ತೋಟಗಳಿಗೆ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ವಸ್ತಾರೆ ಹೋಬಳಿಯ ಕೆಸವಿನ ಮನೆ ಗ್ರಾಮದ ಬೈರೇಗೌಡ, ಮಾರಿಕಟ್ಟೆ ಗ್ರಾಮದ ಧರ್ಮಯ್ಯ ಹಾಗೂ ಮಾರಿಕಟ್ಟೆ, ತೊಂಡುವಳ್ಳಿ ಗ್ರಾಮದ ಕಾಫಿ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ನಂತರ ಚಿಕ್ಕಮಗಳೂರು ಅರಣ್ಯ ಇಲಾಖೆಗೆ ಭೇಟಿ ನೀಡಿ ಡಿಎ್ಒ ಜತೆ ಚರ್ಚಿಸಿ ಹಾನಿಯಾದ ತೋಟಗಳಿಗೆ ಪರಿಹಾರ ನೀಡುವಂತೆ ಹಾಗೂ ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿದರು. ಮಂಜಪ್ಪಯ್ಯ, ಎಚ್.ಎಚ್.ದೇವ್‌ರಾಜ್, ಹೊಲದಗದ್ದೆ ಗಿರೀಶ್, ದಯಾನಂದ್, ಅಣ್ಣಯ್ಯಮರ್ಲೆ, ಜಗನ್ನಾಥ್, ಭೈರೇಗೌಡ್ರು, ಈರಯ್ಯ, ಗುರುಶಾಂತಪ್ಪ ಇದ್ದರು.