ಮುದ್ದೇಬಿಹಾಳದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Former MLA, AS Patil Nadahalli, Muddebihala, BJP Membership Campaign,
ಮುದ್ದೇಬಿಹಾಳದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಚಾಲನೆ ನೀಡಿದರು. ಜಗದೀಶ ಪಂಪಣ್ಣವರ, ಡಾ.ರೇವಣಸಿದ್ಧ ಮಸೂತಿ, ರಾಜು ಬಳ್ಳೊಳ್ಳಿ, ಸಂಗಮ್ಮ ದೇವರಳ್ಳಿ, ಬಸಪ್ಪ ತಟ್ಟಿ, ಸಂಜು ಬಾಗೇವಾಡಿ, ರಾಮು ಪೂಜಾರಿ, ಸಂತೋಷ ಬಾದರಬಂಡಿ ಇತರರಿದ್ದರು.
Published on

ಮುದ್ದೇಬಿಹಾಳ: ಭಾರತವು 2047ರ ವೇಳೆಗೆ ವಿಶ್ವದ ಅತ್ಯಂತ ಬಲಶಾಲಿ ರಾಷ್ಟ್ರವಾಗುತ್ತದೆಂದು ಇಡೀ ವಿಶ್ವ ನಂಬಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣರಾಗಿದ್ದಾರೆ ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ಸಂಗಮೇಶ್ವರ ನಗರದಲ್ಲಿ ಬನ್ನಿಮಹಾಂಕಾಳಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಬಜೆಪಿ ಸದಸ್ಯತ್ವ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿದ ನಂತರ ಸಭೆಯಲ್ಲಿ ಅವರು ಮಾತನಾಡಿದರು.

ಅತಿ ದೊಡ್ಡ ರಾಜಕೀಯ ಪಕ್ಷ ಬಿಜೆಪಿ ಮಾತ್ರ ರಾಷ್ಟ್ರೀಯತೆಯ ಚಿಂತನೆಗಳನ್ನು ಹೊಂದಿದೆ. ಇಂಥ ಪಕ್ಷದ ಪ್ರಾಥಮಿಕ ಸದಸ್ಯರಾಗಲು ಎಲ್ಲೆಡೆ ಸಾಕಷ್ಟು ಉತ್ಸಾಹ ಕಂಡು ಬರುತ್ತಿದೆ. ಸುಭದ್ರ ರಾಷ್ಟ್ರಕ್ಕಾಗಿ, ಸನಾತನ ಹಿಂದು ಧರ್ಮ ರಕ್ಷಣೆಗಾಗಿ ಇರುವ ಏಕೈಕ ಪಕ್ಷ ಬಿಜೆಪಿಯಾಗಿದೆ. ಮತಕ್ಷೇತ್ರ ವ್ಯಾಪ್ತಿಯ 3 ಪಟ್ಟಣ, 110ಕ್ಕೂ ಹೆಚ್ಚು ಹಳ್ಳಿಗಳಲ್ಲಿ 50,000 ಸದಸ್ಯರನ್ನು ನೇಮಿಸುವ ಗುರಿ ನೀಡಿದ್ದು ಇದನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಶ್ರಮಿಸಬೇಕು ಎಂದರು.

ಹಿರಿಯ ಮುಖಂಡ ಮಲಕೇಂದ್ರಗೌಡ ಪಾಟೀಲ ಮಾತನಾಡಿ, ಬಿಜೆಪಿಯು ಕಾಂಗ್ರಸ್ಸಿನಂತಲ್ಲ. ನಮ್ಮ ಸದಸ್ಯತ್ವ ನಿರಂತರ ಪ್ರಕ್ರಿಯೆ. ಅವರದ್ದು ಚುನಾವಣೆ ಬಂದಾಗ ಮಾತ್ರ. ಮುಸ್ಲಿಮರಿಗೂ ಕಾಂಗ್ರೆಸ್ ತಮ್ಮನ್ನು ಬಳಸಿಕೊಳ್ಳುತ್ತಿರುವುದು ಗೊತ್ತಾಗಿದೆ. ಅಪಪ್ರಚಾರ ನಮ್ಮನ್ನು ಕಳೆದ ಚುನಾವಣೆಯಲ್ಲಿ ಸೋಲಿಸಿದೆ ಎಂದರು.

ಹಿರಿಯ ಮುಖಂಡರಾದ ಪ್ರಭು ಕಡಿ, ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಡಾ.ರೇವಣಸಿದ್ಧ ಮಸೂತಿ, ಡಾ.ವೀರೇಶ ಪಾಟೀಲ, ನಿವೃತ್ತ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ರಾಜಶೇಖರ ಮೇಗೇರಿ ಸದಸ್ಯತ್ವ ಅಭಿಯಾನ, ಪಕ್ಷದ ಸಾಧನೆ ಕುರಿತು ಮಾತನಾಡಿದರು.
ಬಿಜೆಪಿ ಮುದ್ದೇಬಿಹಾಳ ಮಂಡಲ ಕಾರ್ಯದರ್ಶಿ ಸಂಜು ಬಾಗೇವಾಡಿ ಸದಸ್ಯತ್ವ ಮಾಡುವ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು.

ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಜಿಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ,
ಪುರಸಭೆ ಸದಸ್ಯರಾದ ಸದಾಶಿವ ಮಾಗಿ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಅಶೋಕ ವನಹಳ್ಳಿ, ಬಸಪ್ಪ ತಟ್ಟಿ, ರಾಮು ಪೂಜಾರಿ, ಪ್ರೀತಿ ಕಂಬಾರ, ಕಾವೇರಿ ಕಂಬಾರ, ರೇಖಾ ಕೊಂಡಗೂಳಿ, ರಾಜು ಬಳ್ಳೊಳ್ಳಿ, ಹಣಮಂತ ನಲವಡೆ, ಸೋಮನಗೌಡ ಬಿರಾದಾರ, ಪರಶುರಾಮ ನಾಲತವಾಡ, ಶ್ರೀಶೈಲ ದೊಡಮನಿ, ಸಂತೋಷ ಬಾದರಬಂಡಿ, ರಾಮು ಪವಾರ, ಬಾಪುಗೌಡ ಪಾಟೀಲ, ಅಶೋಕ ಮಣಿ, ನಾಲತವಾಡ ಭಾಗದ ಪ್ರಮುಖರಾದ ಗಿರೀಶಗೌಡ ಪಾಟೀಲ, ಕೆ.ಆರ್.ಎತ್ತಿನಮನಿ, ಚನ್ನಪ್ಪ ಹಂಪನಗೌಡರ, ಈರಣ್ಣ ಮುದ್ನೂರ, ವೀರೇಶ ರಕ್ಕಸಗಿ, ಅಮರೇಶ ಹಟ್ಟಿ, ಸಂಗನಗೌಡ ಕುಳಗೇರಿ, ಮಹಾಂತೇಶ ಮನದಾಳಮಠ ಇತರರಿದ್ದರು. ಬಿ.ವಿ.ಕೋರಿ ಸ್ವಾಗತಿಸಿದರು. ಸಿದ್ದರಾಜ ಹೊಳಿ ನಿರ್ವಹಿಸಿದರು. ಇದಕ್ಕೂ ಮುನ್ನ ಸಾಂಕೇತಿಕವಾಗಿ ಕೆಲ ಮನೆಗಳಿಗೆ ತೆರಳಿ ಮೊಬೈಲ್ ಲಿಂಕ್ ಮೂಲಕ ಸದಸ್ಯತ್ವ ಮಾಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net