ಸಾಮರಸ್ಯದ ಬಾಳ್ವೆಯಿಂದ ಒಡಕಿಗೆ ಆಸ್ಪದವಿರದು

HNL SM
Published on

ಹೊನ್ನಾಳಿ: ವೈವಾಹಿಕ ಜೀವನದಲ್ಲಿ ಒಡಕಿಗೆ ಆಸ್ಪದ ಕೊಡದಂತೆ ಸತಿ-ಪತಿಗಳಿಬ್ಬರು ಸಾಮರಸ್ಯದಿಂದ ಜೀವನ ನಡೆಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಲಹೆ ನೀಡಿದರು.

ತಾಲೂಕಿನ ಕೂಲಂಬಿ ಗ್ರಾಮದಲ್ಲಿರುವ ಪವಾಡ ಪುರುಷ ಗುರು ಗದ್ದಿಗೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಟುಂಬದಲ್ಲಿ ಅಭಿಪ್ರಾಯ ಭೇದ ಬರುತ್ತವೆ. ಪರಸ್ಪರ ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ವೈಮನಸ್ಸಿಗೆ ಅವಕಾಶ ಮಾಡಕೊಡಬೇಡಿ. ಅತ್ತೆಯನ್ನು ತಾಯಿಯಂತೆ ನೋಡಿಕೊಂಡರೆ, ಅವರು ನಿಮ್ಮನ್ನು ಮಗಳಂತೆ ನೋಡಿಕೊಳ್ಳುತ್ತಾರೆ ಎಂದರು.

ಗುರು ಗದ್ದಿಗೇಶ್ವರ ದೇವಸ್ಥಾನದ ಕಮಿಟಿ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಪ್ರತಿವರ್ಷ ಸರಳ ಸಾಮೂಹಿಕ ಮಾಡುತ್ತಾ ಬಂದಿದ್ದೇವೆ. ಇಲ್ಲಿ ಮದುವೆಯಾದರೆ ಸಾಲದ ಸುಳಿಗೆ ಸಿಲುಕುವ ಭೀತಿ ಇಲ್ಲ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ಸುರೇಂದ್ರಗೌಡ ಮಾತನಾಡಿ, ವೈಭವದ ಮದುವೆ ಮಾಡಿ ಸಾಲಗಾರನಾಗುವ ಬದಲು ಸರಳ ಮದುವೆ ಮಾಡಿದರೆ ಆ ಕುಟುಂಬ ಸಾಲದಿಂದ ಮುಕ್ತಿ ಹೊಂದುತ್ತದೆ ಎಂದರು.

ಸರಳ ಸಾಮೂಹಿಕ ಕಾರ್ಯಕ್ರಮದಲ್ಲಿ 22 ಜೋಡಿಗಳು ಸಪ್ತಪದಿ ತುಳಿದರು. ಸಹಸ್ರಾರು ಭಕ್ತರಿಗೆ ಅನ್ನದಾನ ಮಾಡಲಾಯಿತು.

ಬಸವಲಿಂಗಪ್ಪ, ಹೇಮಂತರಾಜ್, ಬಸವರಾಜಪ್ಪ, ರೇವಣಸಿದ್ದಪ್ಪ, ಟಿ.ಎಸ್. ಬಸವರಾಜು, ಗ್ರಾಪಂ ಅಧ್ಯಕ್ಷ ಕೆ.ಬಿ. ಸಿದ್ದನಗೌಡ, ಉಪಾಧ್ಯಕ್ಷ ಟಿ.ಎಸ್. ಬಸವರಾಜಪ್ಪ, ಪುನೀತ್‌ಕುಮಾರ್, ಆಂಜನೇಯ, ಎಚ್.ಎನ್. ಲೋಕೇಶ್ ಪಾಟೀಲ್, ಎಂ.ಜಿ.ನಾಗರಾಜು, ಲಿಂಗರಾಜು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net