ಮಾಜಿ ಶಾಸಕರಿಗೆ ಸಿಡಿ ಬ್ಲ್ಯಾಕ್ ಮೇಲ್;  ಡಿಕೆ ಶಿವಕುಮಾರ ವಿರುದ್ದ ಸಿಬಿಐಗೆ ದೂರು!

20231030_122323.jpg
Published on


-ಮಾಜಿ ಸಚಿವ ರಮೇಶ ಜಾರಕಿಹೊಳಿ ಆಕ್ರೋಶ
ಬೆಳಗಾವಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತನ್ನ ಬ್ಲ್ಯಾಕ್ ಮೇಲ್ ರಾಜಕಾರಣ ಮುಂದುವರಿಸಿದ್ದು,‌ನೆಲಂಮಗಲ, ಕೊಳ್ಳೆಗಾಲ ಮಾಜಿ ಶಾಸಕರಿಗೆ ಸಿಡಿ ಇದೆ ಎಂದು ಬ್ಲ್ಯಾಕ್ ಮೇಲೆ ಮಾಡುತ್ತಿದ್ದು, ಈ ಕುರಿತು ಸಿಬಿಐ ತನಿಖೆಗೆ ವಹಿಸುವಂತೆ ಸಿದ್ದ ರಾಮಯ್ಯ, ಗೃಹ ಸಚಿವರನ್ನು ಭೇಟಿ ಮಾಡಿ‌ಮನವಿ ಸಲ್ಲಿಸಿತ್ತೇನೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇರಾನೇರ ರಾಜಕಾರಣ ಮಾಡುವ ಧೈರ್ಯ ಶಿವಕುಮಾರಗಿಲ್ಲ. ಹಿಂಬಾಗಿಲಿನ, ಮೋಸಗಾರ ರಾಜಕಾರಣಿ. ನಾನು ಶಿವಕುಮಾರ ಒಟ್ಟಿಗೆ 16 ವರ್ಷ ರಾಜಕಾರಣ‌ಮಾಡಿದ್ದೇವೆ. ಆ ವ್ಯಕ್ತಿ ಹೇಗೆ ಎಂಬುದು ನನಗೆ ಚನ್ನಾಗಿ ಗೊತ್ತು ಎಂದರು.
ಮಾಜಿ ಶಾಸಕರ ನ್ನು ಸಿಡಿ ಇದೆಯಿದೆ  ಎಂದು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ಪಾಠ ಕಲಿಸುತ್ತೇವೆ.‌ ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹವಸಚಿವ ಡಾ.‌ಜಿ.‌ಪರಮೇಶ್ವರ ಅವರನ್ನು ಭೇಟಿಯಾಗಿ ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net