ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಲಿ

SND-03
ಸಿಂಧನೂರು ತಾಲೂಕಿನ ದುಮತಿ ಗ್ರಾಮದ ಜಮೀನಿನಲ್ಲಿ ಮಾಜಿ ಸಚಿವ ವೆಂಕಟರಾವ ನಾಡಗೌಡ ಬೆಳೆಹಾನಿ ಪರಿಶೀಲಿಸಿದರು. ಜೆಡಿಎಸ್ ನಗರ ಘಟಕ ಅಧ್ಯಕ್ಷ ರವಿಕುಮಾರ ಪನ್ನೂರು, ಪ್ರಮುಖರಾದ ಲಿಂಗರಾಜ ಪಾಟೀಲ್ ರಾಗಲಪರ್ವಿ, ಅಶೋಕಗೌಡ ಗದ್ರಟಗಿ, ಧರ್ಮನಗೌಡ ಮಲ್ಕಾಪುರ, ಕೆ.ಜಿಲಾನಿ ಪಾಷಾ, ವೆಂಕೋಬ ಕಲ್ಲೂರು ಇತರರಿದ್ದರು.
Published on

ಸಿಂಧನೂರು: ಮಳೆಗೆ ಅಪಾರ ಬೆಳೆ ಹಾನಿಯಾಗಿದ್ದು, ಕೂಡಲೇ ಸರ್ವೇ ನಡೆಸಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕೆಂದು ಮಾಜಿ ಸಚಿವ ಹಾಗೂ ಕೆಒಎಫ್ ಅಧ್ಯಕ್ಷ ವೆಂಕಟರಾವ ನಾಡಗೌಡ ಒತ್ತಾಯಿಸಿದರು.

ತಾಲೂಕಿನ ದಿದ್ದಗಿ, ರಾಮತ್ನಾಳ, ರಾಗಲಪರ್ವಿ, ದುಮುತಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶನಿವಾರ ಬೆಳೆಹಾನಿ ಪರಿಶೀಲಿಸಿ ಮಾತನಾಡಿದರು. ತಾಲೂಕು ವ್ಯಾಪ್ತಿಯಲ್ಲಿ ರೈತರು ಸಮೃದ್ಧವಾಗಿ ಬೆಳೆದ ಬೆಳೆಗಳು ನಿರಂತರ ಮಳೆಯಿಂದ ಸಂಪೂರ್ಣ ಹಾನಿಯಾಗಿವೆ.

ಇನ್ನೂ ಕೆಲ ರೈತರು ಎರಡ್ಮೂರು ಬಾರಿ ಬಿತ್ತನೆ ಮಾಡಿದ್ದಾರೆ. ಮಳೆಯಿಂದ ತೊಗರಿ, ಹತ್ತಿ, ಜೋಳ, ಕೆಲಕಡೆ ಭತ್ತಕ್ಕೂ ವಿವಿಧ ರೋಗ ತಗುಲಿ ನಷ್ಟವಾಗಿದೆ. ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದು, ಈಗ ಸಂಪೂರ್ಣ ಬೆಳೆ ನಷ್ಟದಿಂದ ಕಂಗೆಟ್ಟಿದ್ದಾರೆ.

ಕೂಡಲೇ ಪಾರದರ್ಶಕವಾಗಿ ಸರ್ವೇ ನಡೆಸಿ, ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದರು. ಪ್ರಮುಖರಾದ ವೆಂಕಟೇಶ ನಂಜಲದಿನ್ನಿ, ಸುಮಿತ್ ತಡಕಲ್, ಎಸ್.ಬಿ.ಮೈಲಾಪುರ, ಎಸ್.ಪಿ.ಟೇಲರ್, ತಿಮ್ಮಣ್ಣ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net