ಮಾ.19ರಂದು ನಾಗಮಂಗಲದಲ್ಲಿ ಕೃಷ್ಣಪ್ಪ ನೆನಪು: ಬರಹಗಾರ ಬಿ.ಚಂದ್ರೇಗೌಡ ಮಾಹಿತಿ

Former minister HT Krishnappa memorial program Mandya
Published on

ಮಂಡ್ಯ: ನಾಗಮಂಗಲದ ಮಾಜಿ ಸಚಿವ ದಿವಂಗತ ಎಚ್.ಟಿ.ಕೃಷ್ಣಪ್ಪ ಅವರ 3ನೇ ವರ್ಷದ ನೆನಪಿನ ಕಾರ್ಯಕ್ರಮವನ್ನು ನಾಗಮಂಡಲ ಬಳಗದಿಂದ ಪುಣ್ಯಕೋಟಿ ಸ್ಮರಣೆ ಶೀರ್ಷಿಕೆಯಡಿ ಮಾ.19ರಂದು ಆಯೋಜಿಸಲಾಗಿದೆ ಎಂದು ಬರಹಗಾರ ಬಿ.ಚಂದ್ರೇಗೌಡ ತಿಳಿಸಿದರು.

ನಾಗಮಂಗಲ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮ ಬೆಳಗ್ಗೆ 11ಕ್ಕೆ ಆರಂಭಗೊಳ್ಳಲಿದೆ. ಇದೇ ವೇಳೆ ರಂಗಭೂಮಿ ನಟಿ, ಪ್ರಸಿದ್ಧ ಆಂಜನೇಯ ಪಾತ್ರಧಾರಿ ಮಂಡ್ಯದ ರಮಾಬಾಯಿ ಅವರಿಗೆ ಪುಣ್ಯಕೋಟಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸರಳ ಮತ್ತು ಸಜ್ಜನ ರಾಜಕಾರಣಿಯಾಗಿ ಗಮನ ಸೆಳೆದಿದ್ದ ಎಚ್.ಟಿ.ಕೃಷ್ಣಪ್ಪ ಅವರು ಆರೋಗ್ಯ, ಅಬಕಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಪ್ರತಿಸ್ಪರ್ಧಿಗಳು, ಪ್ರತಿಪಕ್ಷದವರನ್ನು ಸ್ನೇಹಭಾವದಿಂದ ಕಾಣುತ್ತಾ ಅಜಾತ ಶತ್ರುವಾಗಿದ್ದರು. ಕಲೆ, ಸಂಸ್ಕೃತಿ ಮತ್ತು ರಂಗಭೂಮಿಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ಹೀಗಾಗಿ ಅವರ ಇಷ್ಟದ ಕ್ಷೇತ್ರದ ರಂಗಭೂಮಿಯನ್ನು ಪರಿಗಣಿಸಿ ರಂಗನಟಿ ರಮಾಬಾಯಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ರಂಗಗೀತೆಗಳನ್ನು ಪ್ರಸ್ತುತಪಡಿಸಲಾಗುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮದ ಆಯೋಜಕ ಭಗವಾನ್ ಚಕ್ರವರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net