ಪ್ರಾಮಾಣಿಕವಾಗಿ ಕೆಲಸ ಮಾಡಿ

background (7)
Published on

ಕುಕನೂರು: ಒಂದು ಸಹಕಾರಿ ಸಂಘ ಬೆಳೆಯಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಅದಕ್ಕೆ ಮುಖ್ಯ ಕಾರಣ ಸಹಕಾರಿ ಸಂಘದ ಷೇರುದಾರರು, ಸಂಘದ ಪದಾಧಿಕಾರಿಗಳು. ಷೇರುದಾರರು ಪಡೆದಂತಹ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದರೆ ಇಂತಹ ಬೃಹದಾಕಾರದ ಸಹಕಾರಿ ಸಂಘವಾಗಿ ಬೆಳೆಯಲು ಸಾಧ್ಯವಾಗಿದೆ. ಸಂಘದ ಅಧ್ಯಕ್ಷರು ಪ್ರಾಮಾಣಿಕತೆಯಿಂದ ಸಮಾಜಮುಖಿ ಕೆಲಸವನ್ನು ಮಾಡಿದಾಗ ಸಂಘದ ಯಶಸ್ಸು ಸಾಧ್ಯ ಎನ್ನುವುದಕ್ಕೆ ಈ ಸಂಘವೇ ನಿದರ್ಶನ ಎಂದರು.

ಅಧ್ಯಕ್ಷ ಪ್ರಭುರಾಜ ಪಾಟೀಲ್, ಉಪಾಧ್ಯಕ್ಷ ವಿರೂಪಾಕಪ್ಪ ದೊಡ್ಮನಿ, ನಿರ್ದೇಶಕರಾದ ನಾಗರಾಜ ಗಿರಡ್ಡಿ, ಅರುಣ ಜಿರಾಳ, ಹನುಮಪ್ಪ ಯಕ್ಲಾಸಪುರ್, ಯಲ್ಲಪ್ಪ ಮುಧೋಳ, ರೇವಣಸಿದ್ದೇಶ್ವರ, ಶಾಂತವ್ವ ಬಸವರಾಜ ಮುಧೋಳ, ವಿಜಯಲಕ್ಷ್ಮೀ ಬಸವರಾಜ ಅಮರಗೋಳ, ಯಂಕಣ್ಣ ದೇವರಮನಿ, ಬಸವರಾಜ ಅಂದಪ್ಪ ರಾಜೂರು, ಈರಣ್ಣ ವೀರಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net