ನನ್ನ ಮನೆ ಮುಂದೆ ಬಂದು ಕಾಯ್ತಿದ್ದ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಹೇಳಿದ್ದು ಯಾರಿಗೆ?

shivakumar
Published on

ಬೆಂಗಳೂರು: ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿ.ಪಿ.ಯೋಗೇಶ್ವರ್​ ಹಿಂದೆ ನನ್ನ ಮನೆ ಮುಂದೆ ಕಾಯ್ತಿದ್ದ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ವಾಗ್ದಾಳಿ ನಡೆಸಿದ್ದಾರೆ.

ಯೋಗೇಶ್ವರ್​ ರಾಜಕೀಯ ಆರಂಭವಾಗಿದ್ದೆ ನನ್ನ ಮನೆಯಿಂದ. ಅವರು ನನ್ನ ಹಿತೈಷಿ ಎಂದು ನಾನು ಹೇಳುವುದಿಲ್ಲ. ಕನಕಪುರದಲ್ಲಿ ಎಷ್ಟೇಷ್ಟೋ ಕೊಲೆಗಳು ಆಗಿವೆ ಎಂದು ಮಾತನಾಡತ್ತಾರೆ. ಅವರು ಸದನಕ್ಕೆ ಬರಲಿ ಅದಕ್ಕೆ ದಾಖಲೆ ಸಮೇತ ಉತ್ತರ ನೀಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ಸೋತವರನ್ನಾದರೂ ಮಂತ್ರಿ ಮಾಡಲಿ ಅಥವಾ ಗೆದ್ದವರಿಗಾದರೂ ಸಚಿವ ಸ್ಥಾನ ಕೊಡಲಿ. ನಮ್ಮ ಪಕ್ಷ ಬಿಟ್ಟು ಹೋದ ಏಳು ಮಂದಿ ಕಷ್ಟ ಪಡುತ್ತಿದ್ದಾರೆ ಎಂದು ನನಗೆ ತಿಳಿದಿದೆ. ಅವರ ನೋವು ನನಗೆ ಅರ್ಥ ಆಗುತ್ತದೆ. ಅವರಿಗೆ ಒಳ್ಳೆಯದಾಗಲಿ ಎಂದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net