

ಮೈಸೂರು: ಈ ನಾಡಿನಲ್ಲಿ ನಾಲಿಗೆ ಮೇಲೆ ನಿಂತ ನಾಯಕ ಯಡಿಯೂರಪ್ಪ...ಮಾತಿಗೆ ತಪ್ಪದ ಮಗ ಯಡಿಯೂರಪ್ಪ...ಕೊಟ್ಟ ಮಾತನ್ನು ಉಳಿಸಿಕೊಳ್ಳುವ ವ್ಯಕ್ತಿ ಯಡಿಯೂರಪ್ಪ... ಇದು ಮಾಜಿ ಸಚಿವ ಎಚ್.ವಿಶ್ವನಾಥ್ ಆಡಿದ ಮಾತುಗಳು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಈ ಮೇಲಿನ ಮಾತುಗಳಿಗೆ ನೀವು ಅಪವಾದ ಆಗಬೇಡಿ. ರಾಜ್ಯದಲ್ಲಿ ಮಾತಿನ ಮೇಲೆ ನಿಲ್ಲೋರು ನಿವೊಬ್ಬರೇ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ಸಚಿವ ಸ್ಥಾನ ಕೊಟ್ಟೇ ಕೊಡಬೇಕೆಂದು ಹೇಳ್ತಿಲ್ಲ. ಕೊಡೋದು-ಬಿಡೋದು ನಿಮಗೆ ಬಿಟ್ಟ ವಿಚಾರ. ಆದರೆ, ನನ್ನ ಅನುಭವ ಬಳಸಿಕೊಳ್ಳಿ ಎಂದು ಕೇಳುತ್ತಿದ್ದೇನೆ. ದೇಶದ ರಾಜಕಾರಣ ನಡೆಯೋದೆ ಭಾವನೆ ಮತ್ತು ನಂಬಿಕೆ ಮೇಲೆ. ಇದು ಎರಡು ಮುಗಿದು ಹೋದರೆ ರಾಜಕಾರಣ ಇರೋದಿಲ್ಲ. ಜನನಾಯಕರು ಈ ಭಾವನೆ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಯಡಿಯೂರಪ್ಪನವರೇ ನೀವೂ ಮಾತು ತಪ್ಪದ ಮಗನಾಗಿ, ಮಾತು ತಪ್ಪಿದ ಮಗನಾಡಬೇಡಿ. ಯಡಿಯೂರಪ್ಪ ಅವರೇ ನಾಲಿಗೆ ಮೇಲೆ ನಿಂತ ನಾಯಕನಾಗಿ, ನಾಲಿಗೆ ಕಳೆದುಕೊಂಡ ನಾಯಕನಾಗಬೇಡಿ. ಇದು ಜನರ ಅಭಿಪ್ರಾಯವಾಗಿದೆ. ನನಗೇನು ಎಂಎಲ್ಸಿ, ಶಾಸಕ ಸ್ಥಾನ ಕೊಟ್ಟರೆ ನನ್ನ ವ್ಯಕ್ತಿತ್ವ ಮೇಲೂ ಹೋಗಲ್ಲ, ಕೆಳಗೂ ಹೋಗಲ್ಲ. ವಿಶ್ವನಾಥ್ ಹೇಗಿದ್ರು ವಿಶ್ವನಾಥ್. ನನ್ನ ಅನುಭವವನ್ನು ಉಪಯೋಗಿಸಿಕೊಳ್ಳಿ ಪರೋಕ್ಷವಾಗಿ ಸಿಎಂ ಬಿಎಸ್ವೈಗೆ ಎಚ್ಚರಿಕೆ ನೀಡಿದರು. (ದಿಗ್ವಿಜಯ ನ್ಯೂಸ್)