ಮನಪಾ ಮಾಜಿ ಮೇಯರ್ ರಜನಿ ದುಗ್ಗಣ್ಣ ನಿಧನ

Rajani Dugganna
ರಜನಿ ದುಗ್ಗಣ್ಣ
Published on

ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್, ಬಿಜೆಪಿ ನಾಯಕಿ ರಜನಿ ದುಗ್ಗಣ್ಣ(64) ಭಾನುವಾರ ನಿಧನರಾದರು.

ಭಾರತೀಯ ಜನತಾ ಪಕ್ಷ, ಹಿಂದುಪರ ಸಂಘಟನೆ, ಮಹಿಳಾ ಸಂಘಟನೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶ್ರೀ ಶಾರದಾ ಮಾತೃ ಮಂಡಳಿಯಲ್ಲಿ ಸಕ್ರಿಯವಾಗಿ ಸಂಘಟನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸುರತ್ಕಲ್ ಪುರಸಭೆ ಸದಸ್ಯೆ, ಎಪಿಎಂಸಿ ಮಂಗಳೂರು ಉಪಾಧ್ಯಕ್ಷೆ, ಮೂರು ಬಾರಿ ಮನಪಾ ಸದಸ್ಯರಾಗಿ ಉಪಮೇಯರ್ ಹಾಗೂ ಬಿಜೆಪಿಯ ಪ್ರಥಮ ಮಹಿಳಾ ಮೇಯರ್ ಆಗಿದ್ದರು. ನಗರದ ವಿವಿಧ ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಪಡೆದಿದ್ದರು. ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net