

ಗದಗ: ಪ್ರತಿಯೊಬ್ಬ ರೈತರು ಸರಕಾರದ ಸೌಲಭ್ಯಗಳು ಹಾಗೂ ಸಹಾಯಧನ ಪಡೆಯಲು ರೈತರು ತಮಗೆ ಸಂಬಂಧಪಟ್ಟ ಎಲ್ಲಾ ಜಮೀನುಗಳನ್ನು (ಫ್ರೂಟ್ಸ್ ತಂತ್ರಾಂಶ) ಎಫ್.ಐ.ಡಿ ಗೆ ಕಡ್ಡಾಯವಾಗಿ ಜೋಡಣೆ ಮಾಡಿಸಬೇಕು. ಈಗಾಗಲೇ ಎಫ್.ಐ.ಡಿ. ಮಾಡಿಸಿಕೊಂಡ ರೈತರು ತಮ್ಮ ಎಫ್.ಐ.ಡಿ. ಗೆ ಎಲ್ಲ ಜಮೀನಿನ ಸರ್ವೆ ನಂಬರುಗಳು ಜೋಡಣಿಯಾಗಿದೆಯೋ ಅಥವಾ ಇಲ್ಲವೋ ಎಂದು ಕೂಡಲೇ ಪರಿಶೀಲಿಸಿಕೊಳ್ಳಿ ಮತ್ತು ಜಂಟಿ ಖಾತೆದಾರರಿದ್ದಲ್ಲಿ ಪ್ರತಿ ಒಬ್ಬ ಜಂಟಿ ಖಾತೆದಾರರು ಪ್ರತ್ಯೇಕವಾಗಿ ಸೌಲಭ್ಯವನ್ನು ಪಡೆಯಬೇಕೆಂದಲ್ಲಿ ಪ್ರತ್ಯೇಕವಾಗಿ ಎಫ್.ಐ.ಡಿ. ಮಾಡಿಸಿಕೊಳ್ಳಬೇಕು. ಎಫ್.ಐ.ಡಿ. ಮಾಡಿಸದೇ ಇದ್ದಲ್ಲಿ ರೈತರಿಗೆ ಬರುವ ಯಾವುದೇ ಪರಿಹಾರದ ಹಣ ರೈತರ ಖಾತೆಗೆ ಜಮೆ ಆಗುವುದಿಲ್ಲ. ರೈತ ಬಾಂಧವರು ಈ ಕೂಡಲೇ ತಮಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಹುಲಕೋಟಿ/ ಬೆಟಗೇರಿ ಅಥವಾ ಸಹಾಯಕ ಕೃಷಿ ನಇರ್ದೇಶಕರು ಗದಗ ಕಚೇರಿ ಅಥವಾ ಕಂದಾಯ ಇಲಾಖೆ ಗದಗ ಅಥವಾ ಗ್ರಾಮ ಒನ್ – ಅಥವಾ ಸಿ.ಎಸ್.ಸಿ. ಸೆಂಟರ್ ಗಳಿಗೆ ಭೇಟಿ ನೀಡಿ ಎಫ್.ಐ.ಡಿ. ಮಾಡಿಸಿಕೊಳ್ಳಬೇಕು. ಎಫ್.ಐ.ಡಿ. ಮಾಡಲು ಆಧಾರ ಕಾರ್ಡ, ಬ್ಯಾಂಕ್ ಪಾಸ್ ಪುಸ್ತಕ, ಪಹಣಿ (ಹೊಲದ ಉತಾರ) , ದೂರವಾಣಿ ಸಂಖ್ಯೆ , 1 ಭಾವಚಿತ್ರ ( ಫೋಟೋ) ಎಸ್.ಸಿ./ ಎಸ್.ಟಿ. ಇದ್ದಲ್ಲಿ ( ಜಾತಿ ಪ್ರಮಾಣ ಪತ್ರ) ಈ ದಾಖಲೆಗಳನ್ನು ಹಾಜರುಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಗದಗ ತಾಲೂಕ ಸಹಯಕ ಕೃಷಿ ನಿರ್ದೇಶಕರ ಕಾರ್ಯಾಲಯ, ದೂರವಾಣಿ ಸಂಖ್ಯೆ 08372-238773 ಸಂಪರ್ಕಿಸಬಹುದಾಗಿದೆ.