

ಪಾವಗಡ : ಕೃಷಿ ಇಲಾಖೆ ಕಚೇರಿ ಅವರಣದಲ್ಲಿ ಮಂಗಳವಾರ ಆಯೋಜಿಸಿದ್ದ ರೈತ ದಿನಾಚರಣೆಯಲ್ಲಿ
ಪ್ರದರ್ಶನಕ್ಕೆ ಕರೆ ತಂದಿದ್ದ ಹಳ್ಳಿಕಾರ್ ಎತ್ತುಗಳು ಬೆದರಿದ್ದರಿಂದ ಹತ್ತಿರವೇ ಇದ್ದ ಶಾಸಕ ವೆಂಕಟರವಣಪ್ಪ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದರು.
ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಪ್ರಗತಿಪರ ರೈತ ಪ್ರಶಸ್ತಿ ಸ್ವೀಕರಿಸಲು ಚಿಕ್ಕಹಳ್ಳಿ ರೈತ ಬಾಪೂಜಿ ತನ್ನ 5 ಲಕ್ಷ ರೂಪಾಯಿ ಮೊತ್ತದ ಹಳ್ಳಿಕಾರ್ ಎತ್ತುಗಳ ಜತೆ ಬಂಡಿಲ್ಲಿ ಆಗಮಿಸಿದ್ದರು.
ಶಾಸಕರು ಸೇರಿ ಕೆಲ ರೈತರು ಎತ್ತುಗಳ ಜತೆ ೆಟೊ ತೆಗೆದುಕೊಳ್ಳುತ್ತಿದ್ದಾಗ ಇದ್ದಕ್ಕಿದ್ದಂತೆ ಎತ್ತುಗಳು ಬೆದರಿ ಒಮ್ಮೆಲೆ ಹಾರಿ ರೈತರ ಮಧ್ಯೆ ನುಗ್ಗಿದವು, ಕೂಡಲೇ ಶಾಸಕರ ಗನ್‌ಮ್ಯಾನ್ ಕುಮಾರ್ ಮತ್ತಿತರರು ಶಾಸಕರಿಗೆ ರಕ್ಷಣೆ ಒದಗಿಸಿ ಅಲ್ಲಿಂದ ಪಕ್ಕಕ್ಕೆ ಕರೆದುಕೊಂಡು ಹೋದರು.
ಎತ್ತುಗಳು ನುಗ್ಗಿದ ರಭಸಕ್ಕೆ ವಿವಿಧ ಇಲಾಖೆಗಳು ಹಾಕಿದ್ದ ಪ್ರದರ್ಶನದ ಮಳಿಗೆಗಳು ಮತ್ತು ಶಾಮಿಯಾನ ಕಿತ್ತು ಹೋಯಿತು. ಸುಮಾರು ಹತ್ತು ನಿಮಿಷಗಳ ಕಾಲ ಸತತ ಪ್ರಯತ್ನಿಸಿ ಎತ್ತುಗಳನ್ನು ತಹಬಂದಿಗೆ ತರಲಾಯಿತು.
ಬಿಜೆಪಿ ಸರ್ಕಾರಕ್ಕೆ ಶೋಭೆಯಲ್ಲ: ಈ ಬಾರಿ ಅಧಿಕ ಮಳೆಯಿಂದ 62 ಸಾವಿರ ಹೆಕ್ಟೇರ್‌ನಲ್ಲಿ ಬೆಳೆನಷ್ಟ ಉಂಟಾಗಿದ್ದು, ಕೇವಲ 270 ಹೆಕ್ಟೇರ್‌ಗೆ 1 ಕೋಟಿ ರೂಪಾಯಿ ಬೆಳೆ ನಷ್ಟ ಪರಿಹಾರ ಮೂಂಜೂರಾಗಿದೆ. ಕರೊನಾ ನೆಪ ಹೇಳಿಕೊಂಡು ಸರ್ಕಾರದಲ್ಲಿ ಹಣ ಇಲ್ಲ ಎಂದು ಹೇಳುತ್ತಿರುವುದು ಬಿಜೆಪಿ ಸರ್ಕಾರಕ್ಕೆ ಶೋಭೆಯಲ್ಲ ಎಂದು ಶಾಸಕ ವೆಂಕಟರವಣಪ್ಪ ಹೇಳಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಯಿಂದ ಕೆರೆಗಳಿಗೆ ನೀರು ಹರಿಸಿದಾಗ ತಾಲೂಕಿನ ರೈತರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.
ಕಿಸಾನ್ ಸಂಘದ ಅಧ್ಯಕ್ಷ ವಿ.ಕೃಷ್ಣರಾವ್ ಮಾತನಾಡಿ, ಕೃಷಿ ಇಲಾಖೆಯ ಸೌಲಭ್ಯಗಳು ಮಧ್ಯವರ್ತಿಗಳ ಪಾಲಾಗುತ್ತಿದ್ದು, ಶಾಸಕರು ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ರೈತ ಸಂಘದ ಮುಖಂಡ ಗಂಗಾಧರ್ ನಾಯ್ಡು ನಾಗಲಮಡಿಕೆ ಹೋಬಳಿಯ ಯಾವೊಬ್ಬ ರೈತರನ್ನೂ ರೈತ ದಿನಾಚರಣೆಗೆ ಆಹ್ವಾನಿಸಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ವಿಜಯಾಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು.
ತಹಸೀಲ್ದಾರ್ ಕೆ.ಆರ್.ನಾಗರಾಜ್, ಕೃಷಿ ಅಧಿಕಾರಿ ರಾಮಾಂಜಿನಪ್ಪ, ಕೃಷಿ ಸಮಾಜದ ಅಧ್ಯಕ್ಷ ದೊಡ್ಡೆಗೌಡ, ಪಶು ವೈದ್ಯ ಡಾ.ಸಿದ್ದಲಿಂಗಯ್ಯ, ತೋಟಗಾರಿಕಾ ಸಹಾಯಕ ನಿರ್ದೇಶಕ ಶಂಕರ್ ಮೂರ್ತಿ, ರೇಷ್ಮೆ ಇಲಾಖೆ ಅಧಿಕಾರಿ ನಾಗರಾಜ್, ಕೃಷಿ ಸಂಶೋಧನಾ ಕೇಂದ್ರದ ಜಗದೀಶ್, ಶ್ರೀವಲ್ಲಿ ಬಯೋಟೇಕ್‌ನ ಮಂಜುನಾಥ್ ರೆಡ್ಡಿ, ಧನುಂಜಯರೆಡ್ಡಿ, ಮತ್ತು ರೈತರು ಹಾಗೂ ರೈತ ಮಹಿಳೆಯರು ಹಾಜರಿದ್ದರು.
ಪ್ರಗತಿಪರ ರೈತ ಪ್ರಶಸ್ತಿ ಪಡೆದವರು : ನಂಜಪ್ಪ ಗುಜ್ಜನಡು, ಲಿಂಗಮಯ್ಯ ನೀಲಮ್ಮನಹಳ್ಳಿ, ಬಾಪೂಜಿ ಚಿಕ್ಕಹಳ್ಳಿ, ಪವನ್ ರಾಜ್ ರೊಪ್ಪ, ಸಂಜೀವ್ ಕುಮಾರ್, ವಡ್ಡರೇವು. ವಿಜಯಮ್ಮ ಕೋಟಗುಡ್ಡ, ಬೊಮ್ಮನಾಗತಿಹಳ್ಳಿ ಪ್ರಕಾಶ್ ಪ್ರಗತಿಪರ ರೈತ ಪ್ರಶಸ್ತಿ ಪಡೆದುಕೊಂಡರು. ಇದೇ ವೇಳೆ ಶ್ರೀವಲ್ಲಿ ಬಯೋಟೆಕ್ ಹಾಗೂ ಕೃಷಿ ಇಲಾಖೆ ವತಿಯಿಂದ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ತಾಲೂಕಿನಲ್ಲಿ ಅತಿವೃಷ್ಟಿ-ಅನಾವೃಷ್ಟಿಯಿಂದ ಬೆಳೆಗಳು ನಾಶವಾಗಿವೆ, ಹುಣಸೆಲ, ಅಡಿಕೆ-ತೆಂಗು- ಎಲೆ, ಶೇಂಗಾ ಬೆಳೆಗಳು ನಷ್ಟವಾಗಿದ್ದು, ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಬೆಳೆನಷ್ಟ ಮಂಜೂರು ಮಾಡಿಸಬೇಕು ಎಂದು ಪೂಜಾರಪ್ಪ ರೈತ ಮತ್ತು ಹಸರು ಸೇನೆ ಸಂಘಧ ಅಧ್ಯಕ್ಷ ತಾಲೂಕಿನಲ್ಲಿ ಕೆರೆ-ಕುಂಟೆಗಳು ಒಡೆದುಹೋಗಿ ಕೆರೆಯಲ್ಲಿನ ನೀರು ಆಂಧ್ರದ ಪಾಲಾಗುತ್ತಿದ್ದು, ಕೂಡಲೇ ಶಾಸಕರು ಸಂಬಂಧಪಟ್ಟಗಳ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಕೆರೆಗಳ ದುರಸ್ತಿ ಮಾಡಿಸಬೇಕು. ಜಿ.ನರಸಿಂಹರೆಡ್ಡಿ ರೈತ ಸಂಘದ ಅಧ್ಯಕ್ಷ