ಹಳ್ಳದಲ್ಲಿ ಸಿಲುಕಿದ ರೈತರು
ರಕ್ಷಣೆಗೆ ಮುಂದಾದ ಅಗ್ನಿಶಾಮಕ ದಳ

IMG-20220909-WA0010.jpg
Published on

ಕೊಪ್ಪಳ: ತಾಲೂಕಿನ ಕಿನ್ನಾಳ ಬಳಿಯ ಹಿರೇಹಳ್ಳ ಜಲಾಶಯದಿಂದ ಅಪಾರ ನೀರು ಹಳ್ಳಕ್ಕೆ ಬಿಟ್ಟ ಕಾರಣ ಕೋಳೂರು ಬಳಿ‌ ಹಳ್ಳದಲ್ಲಿ ಐವರು ರೈತರು ಸಿಲುಕಿಕೊಂಡಿದ್ದು ಅಪಾಯಕ್ಕೀಡಾಗಿದ್ದಾರೆ.

ಮಹಾಂತೇಶ ಡೊಳ್ಳಿನ, ರಮೇಶ ಡೊಳ್ಳಿನ, ಬಸವರಾಜ ಗೊಂದಿಹೊಸಳ್ಳಿ, ಬಸವರಾಜ ಹುಯಿಲಗೋಳ, ಕೆಂಚಪ್ಪ ಕುರಬರ ಎಂಬುವವರು ಹಳ್ಳದಲ್ಲಿ ಸಿಲುಕಿಕೊಂಡವರು.

ಹಳ್ಳದ ದಡದಲ್ಲಿರುವ ಕೃಷಿ ಪಂಪುಸೆಟ್ಟು ತೆಗೆದುಕೊಳ್ಳಲು ಹೋಗಿದ್ದಾರೆ. ಈ ವೇಳೆ ಹಳ್ಳಕ್ಕೆ ಏಕಾಏಕಿ ನೀರು ಬಿಡಲಾಗಿದೆ. ಒಮ್ಮಿಂದೊಮ್ಮಿಲೆ ನೀರು ಬಂದಿದ್ದರಿಂದ ವಾಪಸ್ ದಡಕ್ಕೆ ಬರಲಾಗದೆ ಅಪಾಯಕ್ಕೆ ಸಿಲುಕಿಕೊಂಡಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿದ್ದು ರೈತರ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net