ಗೋಕರ್ಣಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ ಭೇಟಿ

27 GKN 1
Published on

ಗೋಕರ್ಣ: ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ ಅವರು ಕುಟುಂಬ ಸಮೇತ ಶುಕ್ರವಾರ ಶ್ರೀ ಮಹಾಬಲೇಶ್ವರ ಮಂದಿರಕ್ಕೆ ಭೇಟಿ ನೀಡಿ ವಿವಿಧ ಧಾರ್ವಿುಕ ಕಾರ್ಯಗಳನ್ನು ನೆರವೇರಿಸಿದರು. ಪುರಾಣ ಪ್ರಸಿದ್ಧ ಶ್ರೀ ಮಹಾಗಣಪತಿಗೆ ಮೊದಲು ಅರ್ಚನೆ ಕೈಗೊಂಡ ಅವರು ನಂತರ ಶ್ರೀ ಮಹಾಬಲೇಶ್ವರ ಮಂದಿರದಲ್ಲಿ ಆತ್ಮಲಿಂಗಕ್ಕೆ ಮಹಾಮಂಗಳಾರತಿ ಸಹಿತ ನಾನಾ ಸೇವೆ ಸಲ್ಲಿಸಿದರು. ಶ್ರೀ ಮಂದಿರದ ವತಿಯಿಂದ ಸ್ಮರಣಿಕೆ ನೀಡಿ ಲಕ್ಷ್ಮಣ ಅವರನ್ನು ಗೌರವಿಸಲಾಯಿತು. ಶ್ರೀ ಪಾರ್ವತಿ ಮಂದಿರ ಸಂದರ್ಶಿಸಿದ ಅವರು ಕುಂಕುಮಾರ್ಚನೆ, ಪ್ರಾರ್ಥನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net