ನಗರಸಭೆ ಮಾಜಿ ಅಧ್ಯಕ್ಷೆ ಪತಿಗೆ ಹಲ್ಲೆ

udp-15-crime
Published on

ಉಡುಪಿ: ಅಲೆವೂರು ಸಮೀಪದ ಮಂಚಿ ಬಳಿ ಗುರುವಾರ ಮನೆಗೆ ನುಗ್ಗಿದ ಯುವಕನೊಬ್ಬ ನಗರಸಭೆಯ ಮಾಜಿ ಅಧ್ಯಕ್ಷೆ ಶಾಂತಾ ನಾಯ್ಕ್ ಅವರ ಪತಿಗೆ ಮಾರಾಕಾಯುಧದಿಂದ ಇರಿದು ಹಲ್ಲೆ ನಡೆಸಿದ್ದಾನೆ.

ಕೃಷ್ಣ ನಾಯ್ಕ್ (54) ಹಲ್ಲೆಗೊಳಗಾದವರು. ಆರೋಪಿ ಅರ್ಜುನ್ ಏಕಾಏಕಿ ಮನೆಗೆ ನುಗ್ಗಿ ಕೃಷ್ಣ ನಾಯ್ಕ್ ಅವರಿಗೆ ಕಬ್ಬಿಣ ಸಲಾಕೆಯಿಂದ ಇರಿದು ಪರಾರಿಯಾಗಿದ್ದ. ಹಲ್ಲೆಯಿಂದ ಗಂಭೀರಗಾಯಗೊಂಡಿರುವ ಕೃಷ್ಣ ನಾಯ್ಕ್ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net