

ಸವಣೂರ: ಗ್ರಾಮೀಣ ಜನರು ಹೊಂದಿರುವ ಭಕ್ತಿ-ಭಾವಕ್ಕೆ ದೇವರು ಸದಾ ಹಸನ್ಮುಖಿಯಾಗಿರುತ್ತಾನೆ ಎನ್ನುವ ನಂಬಿಕೆ ಎಲ್ಲರಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಚಿಕ್ಕಬೂದಿಹಾಳ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹೊನ್ನತ್ತೆಮ್ಮದೇವಿ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ದೇವಸ್ಥಾನದ ಕಳಸಾರೋಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದ ದೇವಸ್ಥಾನ ನಿರ್ವಣಕ್ಕೆ ಸಹಾಯ, ಸಹಕಾರ ನೀಡುವ ಮೂಲಕ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿದೆ. ಕೇವಲ ದೇವಸ್ಥಾನ ನಿರ್ವಣಕ್ಕೆ ಸಂತಸ ಪಡುವ ಬದಲಾಗಿ, ದೇವಸ್ಥಾನದಲ್ಲಿ ನಿತ್ಯ ಪೂಜೆಯೊಂದಿಗೆ ಯುವ ಜನತೆಗೆ ಧಾರ್ವಿುಕ ಭಾವನೆ ಮೂಡುವ ಕಾರ್ಯಕ್ರಮ ಆಯೋಜಿಸಬೇಕು ಎಂದರು.
ಬೆಳಗ್ಗೆ ಬಂಕಾಪುರ ಅರಳಲೆಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಹೊನ್ನತ್ತೆಮ್ಮದೇವಿ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕೈಗೊಂಡರು.
ವೇಮೂ ಗದಿಗಯ್ಯಶಾಸ್ತ್ರಿ ಮಹಾಂತಿನಮಠ ವಿವಿಧ ಧಾರ್ವಿುಕ ಕಾರ್ಯ ಕೈಗೊಂಡರು.
ಧಾರವಾಡ ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ವೈ. ಪಾಟೀಲ, ಬಿಜೆಪಿ ಮಂಡಳ ಅಧ್ಯಕ್ಷ ಗಂಗಾಧರ ಬಾಣದ, ಗ್ರಾಪಂ ಅಧ್ಯಕ್ಷೆ ರಾಧಕ್ಕ ಹರಿಜನ, ಸದಸ್ಯರಾದ ಸುರೇಶಗೌಡ ಪಾಟೀಲ, ಪ್ರಮುಖರಾದ ಸಿ.ಸಿ. ಅಂಗಡಿ, ಫಕೀರಪ್ಪ ವಾಲ್ಮೀಕಿ, ಬಸವಂತಪ್ಪ ವಾಲ್ಮೀಕಿ, ಭೀಮಪ್ಪ ವಾಲ್ಮೀಕಿ, ಹೊನ್ನಪ್ಪ ವಾಲ್ಮೀಕಿ, ನೀಲಪ್ಪ ವಾಲ್ಮೀಕಿ, ಗಂಗಪ್ಪ ವಾಲ್ಮೀಕಿ, ಜಯಪ್ಪ ವಾಲ್ಮೀಕಿ, ಸುಭಾಸ ವಾಲ್ಮೀಕಿ, ಸುರೇಶ ಬೂದಿಹಾಳ, ಶಂಕರಗೌಡ ಬೂದಿಹಾಳ ಹಾಗೂ ಇತರರು ಪಾಲ್ಗೊಂಡಿದ್ದರು.