

ಮೈಸೂರು: ಭ್ರಷ್ಟಾಚಾರದಲ್ಲಿ ಮುಳುಗಿರುವ ತಿಮಿಂಗಿಲ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಪಕ್ಕದಲ್ಲೇ ಕುಳಿತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಿಮಿಂಗಿಲ ಯಾರು ಅನ್ನುವುದು ಪರಮೇಶ್ವರ್ ಅವರಿಗೆ ಚೆನ್ನಾಗಿ ಗೊತಿದೆ. ತಿಮಿಂಗಲವನ್ನು ಪರಮೇಶ್ವರ್ ಹಿಡಿಯೋದು ಬಿಟ್ಟು ನನ್ನನ್ನು ಕೇಳಿದರೇ ಹೇಗೆ? ಅವರ ಪಕ್ಷದ ಮಂಡ್ಯ ಶಾಸಕರೊಬ್ಬರು ಒಂದು ವಾರದಲ್ಲಿ ತಿಮಿಂಗಿಲ ಸಿಗುತ್ತೆ ಅಂತ ಹೇಳಿಕೆ ನೀಡಿದ್ದಾರೆ. ಆದರೆ, ಮತ್ತೆ ಏನಾಯಿತು ಎಂದು ಪ್ರಸ್ನಿಸಿದರು. ತಿಮಿಂಗಿಲವನ್ನು ಕುಮಾರಸ್ವಾಮಿ ನುಂಗಿಕೊಳ್ಳಲಿ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಸಮಯ ಬರಲಿ ನುಂಗಿದರೇ ಆಯಿತು ಎಂದರು.
ನನ್ನ ಬಳಿಯಿರುವ ಭ್ರಷ್ಟಾಚಾರದ ಮಾಹಿತಿಯ ಪೆನ್‌ಡ್ರೈವ್‌ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಡುತ್ತೇನೆ. ಅದರ ವಿರುದ್ಧ ಕ್ರಮ ತೆಗದುಕೊಳ್ಳುವ ತಾಕತ್ತು ಸರ್ಕಾರಕ್ಕೆ ಇದೆಯಾ? ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಹಣ ಹೊಂದಿಸಲು ಯಾವ ರೀತಿ ಪರದಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರಾ? ಸಿಎಂ ನನ್ನನ್ನು ‘ಹಿಟ್ ಆ್ಯಂಡ್ ರನ್’ ಅನ್ನುತ್ತಾರೆ. ಈ ಹಿಂದೆ ದಾಖಲೆಗಳ ಸಮೇತ ನಾನು ಮಾಡಿದ ಆರೋಪಗಳಿಗೆ ಎಷ್ಟು ಕ್ರಮ ಕೈಗೊಂಡಿದ್ದಾರೆ. ಕ್ರಮ ತೆಗೆದುಕೊಳ್ಳಲು ಈ ಸರ್ಕಾರದಿಂದ ಸಾಧ್ಯವಿಲ್ಲ. ಅದಕ್ಕಾಗಿ ನಾನು ಪೆನ್‌ಡ್ರೈವ್ ನೀಡುತ್ತಿಲ್ಲ ಎಂದು ಹೇಳಿದರು.