ರಾಜ್ಯ ಕಂಡ ಧೀಮಂತ ನಾಯಕ ಧರಂ

25-12jvg01 A
ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರಭಾವತಿ ಧರ್ಮಸಿಂಗ್, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಮಾಜಿ ಶಾಸಕ ವಿಜಯಸಿಂಗ್​ ಇತರರಿದ್ದರು.
Published on

ಜೇವರ್ಗಿ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ನಾಡು ಕಂಡಂತ ಧೀಮಂತ ರಾಜಕಾರಣಿಯಾಗಿದ್ದು, ಜೀವನದುದ್ದಕ್ಕೂ ರಾಜ್ಯ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಸೊನ್ನ ಸಿದ್ಧಲಿಂಗೇಶ್ವರ ವಿರಕ್ತಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.

ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರ ೮೭ನೇ ಜನ್ಮದಿನದ ನಿಮಿತ್ತ ನೆಲೋಗಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಯುವ ರಾಜಕಾರಣಿಗಳಿಗೆ ಧರ್ಮಸಿಂಗ್ ಆದರ್ಶವಾಗಿದ್ದಾರೆ. ಧರ್ಮಸಿಂಗ್ ಸತತ ೮ ಬಾರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದು, ಒಮ್ಮೆ ಮುಖ್ಯಮಂತ್ರಿಯಾಗಿ ಉತ್ತಮ ಸೇವೆ ನೀಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದರಿಂದಲೇ ಅವರನ್ನು ಅಜಾತಶತ್ರು ಎಂದು ಕರೆಯಲಾಗುತ್ತದೆ ಎಂದರು.

ಧರ್ಮಸಿಂಗ್ ಪುತ್ಥಳಿಗೆ ಅರ್ಚಕ ಉಮೇಶ ಭಟ್ಟ ಜೋಶಿ ಪೂಜೆ ಸಲ್ಲಿಸಿದರು.

ಪ್ರಭಾವತಿ ಧರ್ಮಸಿಂಗ್, ಪುತ್ರರಾದ ಶಾಸಕ ಡಾ. ಅಜಯಸಿಂಗ್, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಮಗಳು ಪ್ರಿಯದರ್ಶಿನಿ ಚಂದ್ರಾಸಿಂಗ್, ಶಿವಲಾಲಸಿಂಗ್, ಕಾಶೀಂಪಟೇಲ್ ಮುದವಾಳ, ರಾಜಶೇಖರ ಸೀರಿ, ಮಣೀಂದ್ರಸಿಂಗ್, ಪ್ರಶಾಂತಸಿಂಗ್, ಗೌಡಪ್ಪಗೌಡ ಪೊಲೀಸ್ ಪಾಟೀಲ್ ಆಂದೋಲಾ, ನೀಲಕಂಠರಾವ ಮುಲಗೆ, ಹಣಮಂತರಾವ ಭೂಸನೂರ, ವಿಜಯಕುಮಾರ ಪಾಟೀಲ್ ಕಲ್ಲಹಂಗರಗಾ, ಗಿರೆಪ್ಪಗೌಡ ಪಾಟೀಲ್ ಕಲ್ಲಹಂಗರಗಾ, ಮಾಜೀದ್ ಗಿರಣಿ, ರಾಘವೇಂದ್ರ ಕುಲಕರ್ಣಿ ನರಿಬೋಳ, ಮರೆಪ್ಪ ಸರಡಗಿ, ಲಕ್ಷ್ಮೀಕಾಂತ ಕುಲಕರ್ಣಿ, ಧರ್ಮಸಿಂಗ್ ಅಭಿಮಾನಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಅವರ ಕೊಡುಗೆ ಅಪಾರ. ೩೭೧(ಜೆ) ಕಲಂ ಜಾರಿಗೆ ತಂದ ನಂತರ ಶಿಕ್ಷಣ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಲು ಹೋರಾಟ ನಡೆಸಿದ್ದರು. ನೀರಾವರಿ ಸೌಲಭ್ಯ, ರಸ್ತೆ ನಿರ್ಮಾಣ ಸೇರಿ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೆ ತಂದರು. ಈ ಇಬ್ಬರು ನಾಯಕರು ಕಲಬುರಗಿಯ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ್ದಾರೆ.
| ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸೊನ್ನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net