ಪ್ರಜಾಪ್ರಭುತ್ವ ಸಾಕಾರಕ್ಕೆ ದೇವರಾಜ ಅರಸು ಕೊಡುಗೆ ಅವಿಸ್ಮರಣೀಯ

ARASU
ಅಳವಂಡಿ ಗ್ರಾಪಂನಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿಯನ್ನು ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಭಾನುವಾರ ಪೂಜೆ ಸಲ್ಲಿಸಲಾಯಿತು. ಕರವಸೂಲಿಗಾರ ಶಿವಮೂರ್ತಿ ನಾಯಕ, ಪರಿಚಾರಕ ಹನುಮಂತ ಆವಿನ, ಪ್ರಮುಖರಾದ ಭೀಮಣ್ಣ ನೀಲಿ ಹಿಂಡರ, ಮೈಲಾರಪ್ಪ ಆರೇರ, ಬಾಷುಸಾಬ್ ಗಡಾದ ಇತರರು ಇದ್ದರು.
Published on

ಅಳವಂಡಿ: ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಒಬ್ಬ ರಾಜಕಾರಣಿ ಎನ್ನುವುದಕ್ಕಿಂತ ಅವರೊಬ್ಬ ಸಮಾಜ ಸುಧಾರಕ, ಸಾಮಾಜಿಕ ಕಳಕಳಿಯ ಚಿಂತಕರಾಗಿದ್ದರು ಎಂದು ಕರ ವಸೂಲಿಗಾರ ಶಿವಮೂರ್ತಿ ನಾಯಕ ತಿಳಿಸಿದರು.

ಗ್ರಾಪಂನಲ್ಲಿ ಡಿ.ದೇವರಾಜ ಅರಸು ಜಯಂತಿ ಅಂಗವಾಗಿ ಭಾನುವಾರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿ ಮಾತನಾಡಿದರು. ಪ್ರಜಾಪ್ರಭುತ್ವ ಸಾಕಾರಕ್ಕೆ ಅರಸು ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.

ಗ್ರಾಮೀಣ ಬದುಕಿನ ಎಲ್ಲ ವಿಷಯಗಳನ್ನು ಅರಿತಿದ್ದ ಅರಸರು ದೇಶದ ಬೆನ್ನೆಲುಬಾದ ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಸಾಮಾಜಿಕ ಹೋರಾಟ, ಸಮಾನ ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ನಾಯಕರಾಗಿದ್ದಾರೆ. ರಾಜ್ಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಭೂ ಸುಧಾರಣೆ ಕಾನೂನು, ಉಳುವವನೇ ಭೂಮಿಯ ಒಡೆಯ ಹಾಗೂ ಮೈಸುರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದು, ಅವರ ಪ್ರಮುಖ ನಿರ್ಧಾರಗಳಾಗಿವೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪರಿಚಾರಕ ಹನುಮಂತಪ್ಪ ಆವಿನ, ಪ್ರಮುಖರಾದ ಭೀಮಣ್ಣ ನೀಲಿಹಿಂಡರ, ಮೈಲಾರಪ್ಪ ಆರೇರ, ಬಾಷುಸಾಬ್ ಗಡಾದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net