ಅಂಬೇಡ್ಕರ್ ನಿಗಮದ ಹಿಂದಿನ ಅಧಿಕಾರಿ ರೇಣುಕಾ ಸಾತರ್ಲೆ ಮನೆ ಮೇಲೆ ಲೋಕಾ ದಾಳಿ, ರೂ.2 ಕೋಟಿಗೂ ಅಧಿಕ ಅಕ್ರಮ ಆಸ್ತಿ ಪತ್ತೆ

RANUKA SATARLE LOKA RADE
ವಿಜಯಪುರ ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಹಿಂದಿನ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ ಮನೆಯಲ್ಲಿ ದೊರೆತ ನಗದು ಮತ್ತು ಬೆಳ್ಳಿ-ಬಂಗಾರದ ಆಭರಣಗಳು.
Published on

ವಿಜಯಪುರ: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಹಿಂದಿನ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ ಮನೆ ಮೇಲೆ ಲೋಕಾಯುಕ್ತರು ಗುರುವಾರ ದಾಳಿ ನಡೆಸಿದರು.

ವಿಜಯಪುರದ ಚಾಲುಕ್ಯ ನಗರದ ಮನೆ ಮತ್ತು ಸೋಲಾಪುರ ನಗರದಲ್ಲಿರುವ ಮನೆ ಶೋಧನೆ ಕಾರ್ಯ ನಡೆಸಿದ್ದು, ಈ ವೇಳೆ 10 ಲಕ್ಷ ರೂಪಾಯಿ ನಗದು, ಬೆಳ್ಳಿ, ಬಂಗಾರದ ಆಭರಣಗಳು, ವಾಹನಗಳು ಮತ್ತು ಇತರೆ ಆಸ್ತಿಗಳಿಗೆ ಸಂಬಂಧಿಸಿದಂತೆ ದಾಖಲೆಗಳು ದೊರೆತಿವೆ. 2 ಕೋಟಿ ರೂ.ಗಳಿಗೂ ಅಧಿಕ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.

ಲೋಕಾಯುಕ್ತ ಎಸ್‌ಪಿ ಟಿ. ಮಲ್ಲೇಶ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್‌ಪಿ ಸುರೇಶ ರೆಡ್ಡಿ, ಇನ್ಸಪೆಕ್ಟರ್ ಆನಂದ ವಿ. ಟಕ್ಕನ್ನವರ, ಆನಂದ ಡೋಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net