ಕಾಸರಗೋಡು: ಪೆರ್ಲ ಶ್ರೀ ಅಯ್ಯಪ್ಪ ಭಜನಾ ಮಂದಿರದ 48ನೇ ವಾರ್ಷಿಕ ಸಮಾರಂಭದ ಅಂಗವಾಗಿ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ಡಿ.3ರಿಂದ 5ರವರೆಗೆ ಶ್ರೀ ಅಯ್ಯಪ್ಪ ಮಂದಿರದಲ್ಲಿ ಜರುಗಲಿದೆ.
ಭಜನಾ ಮಂದಿರದ ವಠಾರದಲ್ಲಿ ನಿರ್ಮಿಸಲಾಗಿರುವ ನೂತನ ಸಭಾಂಗಣದ ಲೋಕಾರ್ಪಣೆ ನಡೆಯಲಿದೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಶುಭಾಶೀರ್ವಾದ, ಶುಲುವಾಲುಮೂಲೆ ಶಿವಸುಬ್ರಹ್ಮಣ್ಯ ಭಟ್ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಯುವುದು.
ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ಮಂದಿರದಲ್ಲಿ ಜರುಗಿತು. ಶ್ರೀಧರ ಗುರುಸ್ವಾಮಿ ಬಜಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ವ್ಯಾಪ್ತಿಯ ಭಜನಾ ಮಂದಿರ ಸಮಿತಿ ಪದಾಧಿಕಾರಿಗಳು, ಗುರುಸ್ವಾಮಿಗಳು, ಇತರ ಭಕ್ತರು ಒಟ್ಟು ಸೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಎಣ್ಮಜೆ ಸುಧೀರ್ ಕುಮಾರ್ ಶೆಟ್ಟಿ ಗೌರವಾಧ್ಯಕ್ಷ, ಶ್ರೀಧರ ಗುರುಸ್ವಾಮಿ ಬಜಕೂಡ್ಲು ಅಧ್ಯಕ್ಷ, ಪದ್ಮನಾಭ ಸುವರ್ಣ ಬಜಕೂಡ್ಲು ಪ್ರಧಾನ ಕಾರ್ಯದರ್ಶಿಯಾಗಿರುವ ಸಮಿತಿ ರಚಿಸಲಾಯಿತು. ಮುಂದೆ ವಿವಿಧ ಉಪಸಮಿತಿ ರಚಿಸಿ ತಿರುವಿಳಕ್ಕ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಯಿತು. ಮಂದಿರ ಸಮಿತಿ ಪದಾಧಿಕಾರಿಗಳು, ಗುರುಸ್ವಾಮಿಗಳು, ಭಕ್ತರು ಪಾಲ್ಗೊಂಡಿದ್ದರು. ಶಿವರಾಮ ಬೇಂಗಪದವು ಸ್ವಾಗತಿಸಿದರು. ಪದ್ಮನಾಭ ಸುವರ್ಣ ವಂದಿಸಿದರು.