ಮಾದಿಗ ಸಮಾಜ ಅಭಿವೃದ್ಧಿಗಾಗಿ ಟ್ರಸ್ಟ್ ರಚನೆ

KDR dalith
ಕಡೂರು ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮಾಜ ಶ್ರೇಯೋಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಆರ್.ಜಿ.ಕೃಷ್ಣಸ್ವಾಮಿ, ಕೃಷ್ಣಪ್ಪ, ಎಚ್.ಜಗದೀಶ್, ರಾಘವೇಂದ್ರ, ಶಾಂತಮೂರ್ತಿ, ಲಕ್ಷ್ಮಣ್ ಇತರರಿದ್ದರು.
Published on

ಕಡೂರು: ಮಾದಿಗ ಸಮುದಾಯದವರ ಆತ್ಮಸ್ಥೈರ್ಯ ಹೆಚ್ಚಿಸುವ ಚಿಂತನೆಯಿಂದ ತಾಲೂಕಿನಲ್ಲಿ ಮಾದಿಗ ಸಮಾಜ ಶ್ರೇಯೋಭಿವೃದ್ಧಿ ಟ್ರಸ್ಟ್ ಆರಂಭಿಸಲಾಗಿದೆ ಎಂದು ಟ್ರಸ್ಟ್ ಉಪಾಧ್ಯಕ್ಷ ಹಾಗೂ ಡಿಎಸ್‌ಎಸ್ ಮೈಸೂರು ವಿಭಾಗೀಯ ಸಂಚಾಲಕ ಕೃಷ್ಣ್ಣಪ್ಪ ತಿಳಿಸಿದರು.

ಶೋಷಿತರ ಪರ ಹೋರಾಡಲು ದಲಿತ ಸಂಘರ್ಷ ಸಮಿತಿ ಅಸ್ತಿತ್ವದಲ್ಲಿದೆ. ಅದರ ಹೋರಾಟವೇ ದಲಿತರ ಶಕ್ತಿಯಾಗಿದೆ. ಮಾದಿಗ ಸಮುದಾಯದ ಆತ್ಮಸ್ಥೈರ್ಯ ಮತ್ತಷ್ಟು ಹೆಚ್ಚಿಸಲು ಮತ್ತು ಸಾಮಾಜಿಕ ಸುಧಾರಣಾ ಕಾರ್ಯಸೂಚಿ ಇಟ್ಟುಕೊಂಡು ಟ್ರಸ್ಟ್ ನೋಂದಾಯಿಸಲಾಗಿದೆ. ಶಾಸಕ ಕೆ.ಎಸ್.ಆನಂದ್ ಮತ್ತು ಎಲ್ಲ ಸಮಾಜದವರ ಸಹಕಾರ ಪಡೆದು ಸಮಾಜದ ಏಳಿಗೆಗೆ ಟ್ರಸ್ಟ್ ಶ್ರಮಿಸುತ್ತದೆ. ನಿವೃತ್ತ ಶಿಕ್ಷಕ ಆರ್.ಜಿ.ಕೃಷ್ಣಸ್ವಾಮಿ ಅಧ್ಯಕ್ಷತೆಯಲ್ಲಿ ಟ್ರಸ್ಟ್ ಸಮಾಜಮುಖಿಯಾಗಿ ಕಾರ್ಯ ಮುಂದುವರಿಸುತ್ತದೆ ಎಂದರು.
ಆರ್.ಜಿ.ಕೃಷ್ಣಸ್ವಾಮಿ(ಅಧ್ಯಕ್ಷ), ಕೃಷ್ಣಪ್ಪ, ಎಚ್.ಜಗದೀಶ್(ಉಪಾಧ್ಯಕ್ಷರು), ರಾಘವೇಂದ್ರ(ಪ್ರಧಾನ ಕಾರ್ಯದರ್ಶಿ), ಕುಪ್ಪಾಳು ಶಾಂತಮೂರ್ತಿ(ಸಹ ಕಾರ್ಯದರ್ಶಿ), ಚಿಕ್ಕಿಂಗಳ ಲಕ್ಷ್ಮಣ್(ಕೋಶಾಧ್ಯಕ್ಷ), ಮಲ್ಲಿಕಾರ್ಜುನ್, ಡಿ.ಪ್ರಶಾಂತ್ (ಸಂಘಟನಾ ಕಾರ್ಯದರ್ಶಿಗಳು), ಬಳ್ಳೇಕೆರೆ ಸಂತೋಷ್(ಸಹ ಸಂಘಟನಾಕಾರ್ಯದರ್ಶಿ), ಗೋಪಾಲ್, ಪ್ರಭು (ಕಾನೂನು ಸಲಹೆಗಾರರು), ಶೂದ್ರ ಶ್ರೀನಿವಾಸ್(ಪ್ರಧಾನ ನಿರ್ದೇಶಕ) ನೇಮಕ ಮಾಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net