ಪಿಒಪಿ ವಿಗ್ರಹಗಳ ನಿಷೇಧ ಜಾರಿಗೆ ಕಾರ್ಯಪಡೆ ರಚನೆ

22 Dwd 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ ಕಾಯ್ದೆ ಅಡಿ ಜಿಲ್ಲೆಯ ಕೆರೆ, ನದಿ, ಕಾಲುವೆ, ಬಾವಿ ಹಾಗೂ ಇತರೆ ಜಲಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿರುವ ಹಾಗೂ ರಾಸಾಯನಿಕ, ಕೃತಕ ಬಣ್ಣ ಲೇಪಿತ ವಿಗ್ರಹಗಳ ವಿಸರ್ಜನೆಯನ್ನು ನಿಷೇಽಸಲಾಗಿದೆ. ನಿರಂತರ ತಪಾಸಣೆ ಹಾಗೂ ಸೂಕ್ತ ಕ್ರಮ ಕೈಗೊಳ್ಳಲು ಅವಳಿನಗರದ ವಾರ್ಡ್ ಮಟ್ಟದಲ್ಲಿ ಹಾಗೂ ಎಲ್ಲ ತಾಲೂಕು ಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗಿದೆ ಎಂದು ಜಿಲ್ಲಾಽಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಆದೇಶ ಹೊರಡಿಸಿರುವ ಅವರು, ಅವಳಿನಗರದ ಪ್ರತಿ ವಾರ್ಡ್ ಮಟ್ಟದಲ್ಲಿ ವಲಯ ಸಹಾಯಕ ಆಯುಕ್ತ, ತಹಸೀಲ್ದಾರ್ ಅಥವಾ ಕಂದಾಯ ಇಲಾಖೆ ಅಽಕಾರಿ, ಸಹಾಯಕ ಪೊಲೀಸ್ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ ಅಽಕಾರಿ, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರನ್ನೊಳಗೊಂಡ ಕಾರ್ಯಪಡೆ ಇರುತ್ತದೆ.
ತಾಲೂಕು ಮಟ್ಟದ ಕಾರ್ಯಪಡೆಯಲ್ಲಿ ತಹಸೀಲ್ದಾರ್, ತಾ.ಪಂ. ಕಾರ್ಯನಿರ್ವಾಹಕ ಅಽಕಾರಿ, ಮುಖ್ಯಾಽಕಾರಿಗಳು, ಸರ್ಕಲ್ ಇನ್‌ಸ್ಪ್ಪೆಕ್ಟರ್, ಹೆಸ್ಕಾಂ ಅಽಕಾರಿಗಳು ಹಾಗೂ ಪಂಚಾಯತಿ ಅಭಿವೃದ್ದಿ ಅಽಕಾರಿಗಳಿದ್ದು, ತಮ್ಮ ವ್ಯಾಪ್ತಿಯಲ್ಲಿ ತಪಾಸಣೆ ನಡೆಸುತ್ತಾರೆ. ಈ ತಂಡ ತಪಾಸಣೆ ಮಾಡಿ ವಿವರ ಸಲ್ಲಿಸಲಿವೆ. ಪಿಒಪಿ ವಿಗ್ರಹಗಳಿದ್ದರೆ ಮುಟ್ಟುಗೋಲು ಹಾಕಲು ಸೂಚಿಸಲಾಗಿದೆ. ನಿಷೇಽತ ಪಿಒಪಿ ಗಣೇಶ ಮೂರ್ತಿಗಳಿರುವ ಮಾಹಿತಿ, ದೂರು ಬಂದರೆ ತುರ್ತು ಕ್ರಮ ಕೈಗೊಳ್ಳಬೇಕು. ಮೂರ್ತಿ ತಯಾರಕರು, ಮಾರಾಟಗಾರರ ಸ್ಥಳಗಳಿಗೆ ಅನೀರಿಕ್ಷಿತ ಭೇಟಿ ನೀಡಿ ತಪಾಸಣೆ ಮಾಡಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಜಿಲ್ಲಾಽಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net