ರಾಜಕಾರಣಿಗಳಿಗೆ ಸಂವಿಧಾನವೇ ಅಂಕುಶ

MKG1D
Published on

ಹರಿಹರ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂವಿಧಾನವೇ ಆಡಳಿತಗಾರರಿಗೆ ಅಂಕುಶವಾಗಿದೆ ಎಂದು ದಾವಣಗೆರೆ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಟಿ. ಇನಾಯತ್‌ಉಲ್ಲಾ ಹೇಳಿದರು.

ನಗರದ ವಿದ್ಯಾದಾಯಿನಿ ಶಾಲೆಯಲ್ಲಿ ಶನಿವಾರ ವಿದ್ಯಾರ್ಥಿಗಳ ಕ್ಯಾಬಿನೆಟ್ ರಚನೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ ದಲ್ಲಿ ಮಾತನಾಡಿದರು.

ಪ್ರಜಾಪ್ರಭುತ್ವದ ತತ್ವಗಳನ್ನು ಮಕ್ಕಳಿಗೆ ಕಲಿಸಲು ಶಾಲಾ ಹಂತದಲ್ಲೇ ಸಂಸತ್ ಪರಿಕಲ್ಪನೆ ಪರಿಚಯಿಸಲಾಗಿದೆ. ವಿವಿಧ ಸ್ಥಾನಗಳಿಗೆ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳು ಉತ್ತಮವಾಗಿ ಜವಾಬ್ದಾರಿ ನಿರ್ವಹಿಸಿ, ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕ ಅಧ್ಯಕ್ಷ ಡಿ.ಜಿ. ರಘುನಾಥ್ ಮಾತನಾಡಿ, ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತಿರುವುದು ಈ ಶಾಲೆಯ ವಿಶಿಷ್ಟತೆಯಾಗಿದೆ. ಮಕ್ಕಳ ದೈಹಿಕ ಹಾಗೂ ಮಾನಸಿಕ ದೃಢತೆಗೆ ಸಮಾನ ಅವಕಾಶ ನೀಡಲಾಗುತ್ತಿದೆ ಎಂದರು.

ಆಡಳಿತ ಮಂಡಳಿ ನಿರ್ದೇಶಕಿ ಡಿ.ಆರ್. ರಾಜೇಶ್ವರಿ ಮಾತನಾಡಿದರು. ಶಾಲಾ ವಿದ್ಯಾರ್ಥಿ ನಾಯಕನಾಗಿ ಅಬ್ದುಲ್ಲಾ, ಕಾರ್ಯ ದರ್ಶಿಯಾಗಿ ವೈಷ್ಣವಿ, ಸಾಂಸ್ಕೃತಿಕ ನಾಯಕಳಾಗಿ ಆಕಾಂಕ್ಷಾ, ಕ್ರೀಡಾ ನಾಯಕನಾಗಿ ಮೊಹಮ್ಮದ್ ಸಾಬ್, ಶಿಸ್ತಿನ ನಾಯಕನಾಗಿ ಪಿ.ಕೆ. ರೋಹಿತ್, ಸತ್ಯ ಗುಂಪಿಗೆ ಅಮೀನಾ ಕೌಸರ್, ಶಶಾಂಕ್ ಮತ್ತು ಶಾಂತಿ, ಶಾಂತಿ ಗುಂಪಿಗೆ ವಿಶ್ರುತ, ಸೈಯದ್ ಮುಸಾವೀರ್, ಸೇವಾ ಗುಂಪಿಗೆ ಗಗನ ಲಕ್ಷ್ಮೀ, ಬಿ.ಎಂ. ಹರೀಶ್, ಶ್ರದ್ಧಾ ಗುಂಪಿನ ನಾಯಕರಾಗಿ ಅರುಂಧತಿ ರಾಜ್ ಮತ್ತು ಖಮರ್ ಖಾನ್ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಾಚಾರ್ಯೆ ಆರ್. ಜಯಲಕ್ಷ್ಮೀ, ಶಿಕ್ಷಕ ಅನಂತಮೂರ್ತಿ ಜಿ.ಎಸ್., ವಿದ್ಯಾರ್ಥಿಗಳು, ಶಿಕ್ಷಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net