ಮಡಿಕೇರಿ ದಸರಾ ವೇದಿಕೆ ಸಮಿತಿ ರಚನೆ

dasara samithi
Published on

ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವದ ವೇದಿಕೆ ಸಮಿತಿಯನ್ನು ರಚಿಸಲಾಗಿದ್ದು, ಕನ್ನಂಡ ಕವಿತಾ ಕಾವೇರಮ್ಮ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ದಸರಾ ಕಚೇರಿಯಲ್ಲಿ ನಡೆದ ದಸರಾ ಜನೋತ್ಸವದ ವೇದಿಕೆ ಸಮಿತಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಬಾಳೆಯಡ ಸಬಿತಾ, ಉಪಾಧ್ಯಕ್ಷರಾಗಿ ಅಂಬೆಕಲ್ಲು ನವೀನ್ ಕುಶಾಲಪ್ಪ, ಖಜಾಂಚಿ ಕನ್ನಂಡ ಸುನಿತಾ ಸಂಪತ್ ಹಾಗೂ ಕಾರ್ಯದರ್ಶಿಯಾಗಿ ಟಿ.ಎಸ್.ಸುನಿಲ್ ನೇಮಕಗೊಂಡಿದ್ದಾರೆ.


ಮಡಿಕೇರಿ ದಸರಾ ಜನೋತ್ಸವವನ್ನು ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ನಡೆಸಲು ವೇದಿಕೆ ಸಮಿತಿ ಸಂಪೂರ್ಣ ಸಹಕಾರವನ್ನು ನೀಡಲಿದೆ ಎಂದು ನೂತನ ಅಧ್ಯಕ್ಷೆ ಕನ್ನಂಡ ಕವಿತಾ ಕಾವೇರಮ್ಮ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net