ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಮಿತ್ತಬಾಗಿಲು ಗ್ರಾಮದ ಕಿಲ್ಲೂರಿನ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ನ.6ರಿಂದ ನ.12ರ ತನಕ ನಡೆಯಲಿದ್ದು ಇದರ ಸ್ಥಳೀಯ ಶಿಬಿರ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಮೋಹನ್ ಕಿಲ್ಲೂರು, ಉಪಾಧ್ಯಕ್ಷರಾಗಿ ಸುಧಾಕರ್ ವಳಚಿಲಬೆಟ್ಟು, ಕಾರ್ಯದರ್ಶಿಯಾಗಿ ರಮೇಶ್ ಪೈಲಾರ್, ಜತೆ ಕಾರ್ಯದರ್ಶಿಯಾಗಿ ಯಶೋದಾ ಕಿಲ್ಲೂರು, ಗೌರವ ಸಲಹೆಗಾರರಾಗಿ ಪ್ರಶಾಂತ್ ಬಿ.ಕೆ. ಬೆಂಗಳೂರು, ಸುಬ್ರಹ್ಮಣ್ಯ ಕೊಲ್ಲಿಪಾಲ್, ರತನ್ ಶೆಟ್ಟಿ ಕಿಲ್ಲೂರು, ಸದಸ್ಯರಾಗಿ ಗಿರೀಶ್ ಗೌಡ ಜಾರಿಗೆ, ಚಂದ್ರಶೇಖರ್ ಮಾಲೂರು, ದಿನೇಶ್ ಕಿಲ್ಲೂರು, ಮೋನಪ್ಪ ಗೌಡ ಕೊಲ್ಲಿ, ಪ್ರಮೀಳಾ ಮಾಲೂರು, ಲತಾ ಕಿಲ್ಲೂರು ಆಯ್ಕೆಯಾದರು.