ಕಪ್ಪತಮಲ್ಲೇಶ್ವರ ಅಭಿವೃದ್ಧಿ ಸಮಿತಿ ರಚನೆ

Kappatgudda
Published on

ಮುಂಡರಗಿ: ಸುಕ್ಷೇತ್ರ ಕಪ್ಪತಗುಡ್ಡದ ಶ್ರೀ ಕಪ್ಪತಮಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಇತರ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದಾಗಿ ಕಪ್ಪತಮಲ್ಲೇಶ್ವರ ಕಮಿಟಿ ರಚಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನೆರವು ಪಡೆದುಕೊಂಡು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ಶ್ರೀ ಕಪ್ಪತಮಲ್ಲೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಆನಂದಗೌಡ ಪಾಟೀಲ (ಮುಂಡವಾಡ) ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಮಿಟಿ ಮೂಲಕ ಭಕ್ತರಿಗೆ ಅನಕೂಲ ಕಲ್ಪಿಸಲಾಗುವುದು ಎಂದರು. ಆನಂದಗೌಡ ಅವರು ಶ್ರೀ ಕಪ್ಪತಮಲ್ಲೇಶ್ವರ ದೇವಸ್ಥಾನದ ಅಭಿವೃದ್ಧಿಗೆ 51,000 ರೂ. ದೇಣಿಗೆ ನೀಡಿದರು.

ಪದಾಧಿಕಾರಿಗಳ ಆಯ್ಕೆ: ಕಪ್ಪತಮಲ್ಲೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷರಾಗಿ ಆನಂದಗೌಡ ಪಾಟೀಲ(ಮುಂಡವಾಡ), ಉಪಾಧ್ಯಕ್ಷರಾಗಿ ಮಲ್ಲಪ್ಪ ಹುಯಿಲಗೋಳ, ಕಾರ್ಯದರ್ಶಿಯಾಗಿ ಮನೋಜಕುಮಾರ ಪಾಟೀಲ ಮತ್ತು ಆಡಳಿತ ಮಂಡಳಿ ಸದಸ್ಯರಾಗಿ ಬಸವರಡ್ಡಿ ಪರಮೋಜಿ, ಈರಯ್ಯ ಪಾಟೀಲ, ಬಸವರಡ್ಡಿ ಬಂಡಿಹಾಳ, ಸತ್ಯಪ್ಪ ತಳವಾರ, ಹನುಮಪ್ಪ ಗೊಜನೂರ, ಹಾಲಪ್ಪ ದುಗ್ಗಾಣಿ, ಮರಿತಿಮ್ಮಪ್ಪ ನಾಡಗೌಡ್ರ, ದುರಗಪ್ಪ ಹರಿಜನ, ರಾಮಣ್ಣ ತುರಕಾಣಿ, ಈಶ್ವರಪ್ಪ ಓಲಿ, ಹರ್ಜಪ್ಪ ರಾಠೋಡ ಮತ್ತು ದೇವಪ್ಪ ಹೊರಗಲಮನಿ ಆಯ್ಕೆ ಮಾಡಲಾಗಿದೆ. ಕಪ್ಪತಗುಡ್ಡದ ಸುತ್ತಮುತ್ತಲಿನ ಗ್ರಾಮಗಳ ಹಿರಿಯರನ್ನು ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದರು. ಶಂಕರಗೌಡ ಜಾಯನಗೌಡ, ಹಾಲಪ್ಪ ದುಗ್ಗಾಣಿ ಮಾತನಾಡಿದರು.

ಕಾಶಪ್ಪ ಅಳವಂಡಿ, ವಿಶ್ವನಾಥಗೌಡ ಪಾಟೀಲ, ಭೀಮರಡ್ಡಿ ರಾಜೂರ, ಮಹೇಶ ಗಡಗಿ, ಅಜ್ಜಣ್ಣ ಲಿಂಬಿಕಾಯಿ ಕರಿಯಪ್ಪ ಸೊರಟೂರ, ಲೋಕಪ್ಪ ನಂದಿಕೋಲ, ಮಹೇಶ ರಾಯರಡ್ಡಿ, ಯಲ್ಲಪ್ಪ ಸೋಮಣ್ಣವರ, ರವೀಂದ್ರ ಜವಿ, ಮಾರುತಿ ಮುಡೆಯಮ್ಮನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net