ಗೋಳಿಯಡ್ಕ ಪ್ರಾದೇಶಿಕ ಸಮಿತಿ ರಚನೆ

New Project (11)
Published on

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಮ್ಮಂಗೋಡು ಗೋಳಿಯಡ್ಕ ಪ್ರಾದೇಶಿಕ ಸಮಿತಿ ರಚನಾ ಸಭೆ ಜರುಗಿತು. ಸೀತಾರಾಮ ಬಳ್ಳುಳ್ಳಾಯ ಅಧ್ಯಕ್ಷತೆ ವಹಿಸಿದ್ದರು. ರಾಜನ್ ಮುಳಿಯಾರು ಬ್ರಹ್ಮಕಲಶದ ಬಗ್ಗೆ ವಿವರಿಸಿದರು. ಗೋವಿಂದಬಳ್ಳಮೂಲೆ ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು.

ರಾಘವೇಂದ್ರ ಉಡುಪುಮೂಲೆ-ಗೌರವಾಧ್ಯಕ್ಷ, ಸದಾಶಿವ ಭಟ್ ಮುಂಡಪ್ಪಳ್ಳ-ಅಧ್ಯಕ್ಷ, ಹರಿಶ್ಚಂದ್ರ ಗೋಳಿಯಡ್ಕ, ಜಗದೀಶ ಅಮ್ಮಂಗೋಡು-ಉಪಾಧ್ಯಕ್ಷರು, ಪುರುಷೋತ್ತಮ ಗೋಳಿಯಡ್ಕ-ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಮಹಿಳಾ ಸಮಿತಿಗೆ ಸಂಯೋಜಕರಾಗಿ ವಿಜಯಲಕ್ಷ್ಮೀ ಗೋಳಿಯಡ್ಕ ಅವರನ್ನು ಪುನರಾಯ್ಕೆ ಮಾಡಲಾಯಿತು.

ಸಮಿತಿಯ ಪ್ರಧಾನ ಸಂಯೋಜಕರಾಗಿ ಪ್ರಕಾಶ ಅಮ್ಮಂಗೋಡು ಮತ್ತು ಉಪ ಸಂಯೋಜಕರಾಗಿ ರಾಜೇಂದ್ರ ಗೋಳಿಯಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ವಿಜ್ಞಾಪನಾ ಪತ್ರ ಮತ್ತು ರಶೀದಿ ಪುಸ್ತಕಗಳನ್ನು ಸಮಿತಿಗೆ ಹಸ್ತಾಂತರಿಸಲಾಯಿತು. ಪ್ರಕಾಶ ಅಮ್ಮಂಗೋಡು ಸ್ವಾಗತಿಸಿದರು. ಪುರುಷೋತ್ತಮ ಗೋಳಿಯಡ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net