ನವೋದಯ ವಿದ್ಯಾಸಂಸ್ಥೆಗೆ ಕಾರ್ಯಕಾರಿ ಮಂಡಳಿ ರಚನೆ

Oplus_0
Oplus_0
Published on
  • ಚನ್ನರಾಯಪಟ್ಟಣ : ತಾಲೂಕಿನ ಪತ್ರಿಷ್ಠಿತ ನವೋದಯ ವಿದ್ಯಾಸಂಸ್ಥೆಗೆ ಆಯ್ಕೆಯಾಗಿರುವ ಆಡಳಿತ ಮಂಡಳಿಯ 13 ನಿರ್ದೆಶಕರ ಪೈಕಿ ಸೋಮವಾರ ನೂತನ ಕಾರ್ಯಕಾರಿ ಮಂಡಳಿ ರಚನೆಯಾಗಿದೆ.

  • ಗೌರವ ಅಧ್ಯಕ್ಷರಾಗಿ ಡಾ.ಸಿ.ಎಸ್.ಶೇಷಶಯನ, ಅಧ್ಯಕ್ಷರಾಗಿ ಓ.ಆರ್.ರಂಗೇಗೌಡ, ಉಪಾಧ್ಯಕ್ಷರಾಗಿ ಡಾ.ಪ್ರಮೋದ್, ಕಾರ್ಯದರ್ಶಿಯಾಗಿ ಶರತ್ ಕೆಂಬಾಳು, ಸಹಕಾರ್ಯದರ್ಶಿಯಾಗಿ ಮರುವನಹಳ್ಳಿ ಸಂತೋಷ್ ಮತ್ತು ಖಜಾಂಚಿಯಾಗಿ ಜಲೇಂದ್ರಕುಮಾರ್ ಆಯ್ಕೆಯಾದರು.
    ಸಹಕಾರ ಇಲಾಖೆ ಜಿಲ್ಲಾ ನೋಂದಣಾಧಿಕಾರಿ ನೂತನ ಕಾರ್ಯಕಾರಿ ಮಂಡಳಿಗೆ ಚುನಾವಣೆ ನಿಗದಿಗೊಳಿಸಿದ್ದರು.
  • ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ 13 ನಿರ್ದೇಶಕರಲ್ಲಿ ಪದಾಧಿಕಾರಿ ಸ್ಥಾನ ಪಡೆಯುವ ಆಸೆ ಗರಿಗೆದರಿತ್ತು. ಇದು ರಾಜಕೀಯ ಬಣ್ಣ ಪಡೆದು ಶಾಸಕ ಬಾಲಕೃಷ್ಣ ಮತ್ತು ಮಾಜಿ ಎಂಎಲ್ಸಿ ಗೋಪಾಲಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸುವ ಹಂತಕ್ಕೆ ತಲುಪಿತ್ತು.

  • ಅಂತಿಮವಾಗಿ ಶಾಸಕ ಬಾಲಕೃಷ್ಣರ ಬಣದಲ್ಲಿ 9 ನಿರ್ದೇಶಕರು ಗುರುತಿಸಿಕೊಂಡರೇ, ಗೋಪಾಲಸ್ವಾಮಿ ಅವರ ಬಣದಲ್ಲಿ 4 ನಿರ್ದೇಶಕರು ಗುರುತಿಸಿಕೊಂಡಿದ್ದರು. ಚುನಾವಣೆ ನಿಗದಿಯಾದ ದಿನದಂದು 9 ನಿರ್ದೇಶಕರು ಇರುವ ತಂಡಕ್ಕೆ ಎಲ್ಲ ಪದಾಧಿಕಾರಿಗಳ ಸ್ಥಾನ ಸಿಗುವುದು ಖಚಿತವಾಗಿತ್ತು. ಎಲ್ಲ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗುತ್ತವೆ ಎಂದು ಭಾವಿಸಲಾಗಿತ್ತು. ಆದರೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಕ್ಕೆ ಎರಡೆರೆಡು ಅರ್ಜಿಗಳು ಬಂದ ಹಿನ್ನೆಲೆಯಲ್ಲಿ, ಅರ್ಜಿಯನ್ನು ಯಾರು ಹಿಂಪಡೆಯದ ಕಾರಣ ಚುನಾವಣಾಧಿಕಾರಿ ಡಿ.ಲೀಲಾ 4 ಸ್ಥಾನಗಳಿಗೆ ಗುಪ್ತ ಮತದಾನ ಮೂಲಕ ಚುನಾವಣೆ ನಡೆಸಿದರು.

  • ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಓ.ಆರ್.ರಂಗೇಗೌಡ 9 ಮತ ಪಡೆದರೇ, ಅವರ ಪ್ರತಿಸ್ಪರ್ಧಿ ಗನ್ನಿ ಗಿರೀಶ್ 4 ಮತ ಪಡೆದರು. ಉಪಾಧ್ಯಕ್ಷ ಸ್ಥಾನದ ಡಾ.ಪ್ರಮೋದ್ 9 ಮತ ಪಡೆದರೆ, ಪ್ರತಿಸ್ಪರ್ಧಿ ಜೆ.ಕೆ.ರಾಘವೇಂದ್ರ 4 ಮತ ಪಡೆದರು. ಇನ್ನೂ ಕಾರ್ಯದರ್ಶಿ ಸ್ಥಾನದ ಶರತ್ ಕೆಂಬಾಳು 8 ಮತ ಪಡೆದರೇ, ಅವರ ಪ್ರತಿಸ್ಫರ್ಧಿ ಕೆ.ಆರ್.ಶಿವಕುಮಾರ್ 5 ಮತ ಹಾಗೂ ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಲೇಂದ್ರಕುಮಾರ್ 7 ಮತ ಪಡೆದರೇ, ಅವರ ಪ್ರತಿಸ್ಪರ್ಧಿ ಆದರ್ಶ 6 ಮತ ಪಡೆದು ಒಂದು ಮತದ ಅಂತರದಿಂದ ಸೋತರು. ಗೌರವಾಧ್ಯಕ್ಷರು ಮತ್ತು ಸಹಕಾರ್ಯದರ್ಶಿ ಸ್ಥಾನಗಳು ಅವಿರೋಧವಾಗಿ ಆಯ್ಕೆಗೊಂಡವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net