ನೌಕರರ ಸಂಘದ ಸಮಿತಿ ರಚನೆ

nokara
Published on

ಮಡಿಕೇರಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸಮಿತಿ ರಚನೆ ಮಾಡಲಾಗಿದ್ದು, ವಿವಿಧ ಸರ್ಕಾರಿ ಇಲಾಖೆಗಳಿಂದ ೪೫ ನೌಕರರು ಆಯ್ಕೆಗೊಂಡಿದ್ದಾರೆ ಎಂದು ಸಂಘದ ನೂತನ ಅಧ್ಯಕ್ಷ ಮುಕ್ಕಾಟಿರ ಸಿ.ಅರುಣ್ ಕುಮಾರ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.೧೬ ರಂದು ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ವಿವಿಧ ಸರ್ಕಾರಿ ಇಲಾಖೆಗಳಿಂದ ೪೫ ನೌಕರರು ಆಯ್ಕೆಗೊಂಡಿದ್ದಾರೆ. ಈ ಪೈಕಿ ಇದೀಗ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಪಾರೆಮಜುಲು ತ್ರಿಶೂಲ್, ಖಜಾಂಜಿಯಾಗಿ ಪುಲಿಯಂಡ ಡಿ.ರಾಜೇಶ್, ರಾಜ್ಯ ಪರಿಷತ್ ಸದಸ್ಯರಾಗಿ ಪಿ.ಎಂ.ಬಾಬು ನೇಮಕಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ನೌಕರರ ಸಂಘದ ಕಟ್ಟಡ ನಿರ್ಮಾಣ ಜವಾಬ್ದಾರಿ ನೂತನ ಸಮಿತಿಯ ಮೇಲಿದ್ದು, ಹಿಂದಿನ ಜಿಲ್ಲಾಧಿಕಾರಿ ಎಸ್.ಸಿ.ಸತೀಶ್ ಅವರು ೪೦ ಸೆಂಟ್ ಜಾಗವನ್ನು ಕಟ್ಟಡ ನಿರ್ಮಾಕ್ಕೆ ಮಂಜೂರು ಮಾಡಿದ್ದಾರೆ. ಇದಕ್ಕಾಗಿ ಸದಸ್ಯರ ನೆರವಿನೊಂದಿಗೆ ರೂ.೫ ಕೋಟಿಯನ್ನು ಕ್ರೋಢಿಕರಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಖಜಾಂಜಿ ರಾಜೇಶ್, ಪ್ರಧಾನ ಕಾರ್ಯದರ್ಶಿ ತ್ರಿಶೂಲ್, ರಾಜ್ಯ ಸಮಿತಿ ಸದಸ್ಯ ಪಿ.ಎಂ. ಬಾಬು, ನಿರ್ದೇಶಕರುಗಳಾದ ಕೆ.ಬಿ.ಪ್ರಕಾಶ್, ಕೆ.ಜಿ.ಮಧುಕರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net