ಡಾ. ಕಲಬುರ್ಗಿ ಟ್ರಸ್ಟ್‌ಗೆ ಸಮಿತಿ ರಚನೆ

_85287060_mmkalburgideliveringlecture-1
Published on

ಧಾರವಾಡ: ಖ್ಯಾತ ಸಾಹಿತಿ, ಸಂಶೋಧಕರ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಎಂ.ಎಂ. ಕಲಬುರ್ಗಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗುತ್ತಿರುವ ಟ್ರಸ್ಟ್‌ಗೆ ಸಮಿತಿ ರಚಿಸಿ ಸರ್ಕಾರ ಆದೇಶಿಸಿದೆ. ಟ್ರಸ್ಟ್ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ, ಸದಸ್ಯರಾಗಿ ಶ್ರೀವಿಜಯ ಕಲಬುರ್ಗಿ, ಶಶಿಧರ ತೋಡಕರ, ಹನುಮಾಕ್ಷಿ ಗೋಗಿ, ಡಾ. ಎಚ್.ಎಸ್. ಮೇಲಿನಮನಿ, ಡಾ. ಬಾಳಣ್ಣ ಶೀಗೀಹಳ್ಳಿ, ಡಾ. ಸಿದ್ದನಗೌಡ ಪಾಟೀಲ, ಪ್ರೊ. ಚಂದ್ರಶೇಖರ ವಸದ ಅವರನ್ನು ನೇಮಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net