

ಸುಬ್ರಹ್ಮಣ್ಯ: ಪಂಜದ ಶ್ರೀ ವಾತಾ ಅಮೃತಾನಂದಮಯೀ ಗ್ರಾಮೀಣ ಶಿಕ್ಷಣ ಕೇಂದ್ರದಲ್ಲಿ ಬುಧವಾರ ನಡೆದ ಸಭೆಯಲ್ಲಿ ತಾಲೂಕು ಮಟ್ಟದ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನೆರವೇರಿತು.
ನೂತನ ಅಧ್ಯಕ್ಷರಾಗಿ ಪರಶುರಾಮ ಪಳ್ಳಿಗದ್ದೆ ಕೈಕಂಬ ನೇಮಕಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ದುಗ್ಗಪ್ಪ ಅಗ್ರಹಾರ ಸುಬ್ರಹ್ಮಣ್ಯ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಕೇಶವ ಗೌಡ ಪುತ್ತಿಲ, ಉಪಾಧ್ಯಕ್ಷರಾಗಿ ಧರ್ನಪ್ಪ ಗೌಡ ಅಂಬುಲ ಚಾರ್ವಕ, ಕೋಶಾಧಿಕಾರಿಯಾಗಿ ಉಮೇಶ ಪಂಜದಬೈಲು ನೇಮಕಗೊಂಡರು. ಸದಸ್ಯರಾಗಿ ನೇಮಿರಾಜ ಪಲ್ಲೋಡಿ, ಜಿನ್ನಪ್ಪ, ಧರ್ಮಪಾಲ ಗೌಡ, ಹೊನ್ನಪ್ಪ, ಉಮೇಶ, ರಾಮಕೃಷ್ಣ, ಕುಸುವಾಧರ, ಗುರುಪ್ರಸಾದ್ ತೋಟ, ವೇದಾ ಶಿವರಾಂ, ಜಯಲಕ್ಷ್ಮೀ ಮಲ್ಲಾರ ಸದಸ್ಯರಾಗಿ ಆಯ್ಕೆಯಾದರು.